ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ಸ್ಥಾನವನ್ನು ಕೆ.ಎಲ್. ರಾಹುಲ್ ವಹಿಸಲಿದ್ದಾರೆ ಎನ್ನಲಾಗಿದೆ. ಈ ಸರಣಿಯು ನವೆಂಬರ್ 17ರಿಂದ ಜೈಪುರದಲ್ಲಿ ಆರಂಭಗೊಳ್ಳಲಿದೆ. ಬಳಿಕ ನವೆಂಬರ್ 19 ಹಾಗೂ 21ರಂದು ಕ್ರಮವಾಗಿ ರಾಂಚಿ ಹಾಗೂ ಕೊಲ್ಕತ್ತಾದಲ್ಲಿ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ನವೆಂಬರ್ 25-29ರಂದು ಕಾನ್ಪುರದಲ್ಲಿ ಹಾಗೂ ಡಿಸೆಂಬರ್ 3-7ರಂದು ಮುಂಬೈನಲ್ಲಿ 2 ಟೆಸ್ಟ್ ಪಂದ್ಯಗಳು ನಡೆಯಲಿವೆ.
ಟಿ 20 ವರ್ಲ್ಡ್ ಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಪರ ಆಟವಾಡುತ್ತಿರುವ ಎಲ್ಲಾ ಆಟಗಾರರು ಕಳೆದ ವರ್ಷದಿಂದ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಐಪಿಎಲ್ ಪಂದ್ಯದ ಮುಗಿಯುತ್ತಿದ್ದಂತೆ ಆಟಗಾರರು ಟಿ 20 ವರ್ಲ್ಡ್ ಕಪ್ ಪಂದ್ಯಕ್ಕೆ ತೆರಳಿದ್ದಾರೆ. ಹೀಗಾಗಿ ಟೀ ಇಂಡಿಯಾದ ಮೊದಲ ಆಯ್ಕೆಯ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ. ಹೀಗಾಗಿ ಕೆ.ಎಲ್ ರಾಹುಲ್ ಈ ಪಂದ್ಯದ ಸಾರಥ್ಯ ವಹಿಸುವುದು ಬಹುತೇಕ ಪಕ್ಕಾ ಆಗಿದೆ.
ಹಿರಿಯ ಆಟಗಾರರಿಗೆ ನಿಜಕ್ಕೂ ವಿಶ್ರಾಂತಿಯ ಅಗತ್ಯವಿದೆ. ಟಿ 20 ಸರಣಿಯಲ್ಲಿ ರಾಹುಲ್ ಕೂಡ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇವರು ತಂಡವನ್ನು ಮುನ್ನಡೆಸುವುದು ಬಹುತೇಕ ಪಕ್ಕಾ ಆಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.