ಇನ್ಸ್ಟಾ ಪೋಸ್ಟ್ ನಲ್ಲಿ ಸಾವಿನ ಮುನ್ಸೂಚನೆ..? ಹೊರಡುವ ಸಮಯ ಬಂದಿದೆ ಎಂದವರು ಬಾರದ ಲೋಕಕ್ಕೆ…! 02-11-2021 7:37AM IST / No Comments / Posted In: Latest News, India, Live News 2019ರಲ್ಲಿ ಮಿಸ್ ಕೇರಳ ಕಿರೀಟ ಮುಡಿಗೇರಿಸಿಕೊಂಡಿದ್ದ 25 ವರ್ಷದ ಅನ್ಸಿ ಕಬೀರ್ ಕೊಚ್ಚಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಜೊತೆಯಲ್ಲಿ ಇದೇ ಸ್ಪರ್ಧೆಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ 26 ವರ್ಷದ ಅಂಜನಾ ಶಾಜಾನ್ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ದುರಂತ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ವೇಳೆ ಕಾರು ನಿಯಂತ್ರಣ ತಪ್ಪಿದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ. ಇವರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇನ್ನೊಂದು ವಿಚಿತ್ರ ವಿಚಾರ ಅಂದರೆ ಇದೇ ಅನ್ಸಿ ಕಬೀರ್ ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಬಿಳಿ ಬಣ್ಣದ ವಸ್ತ್ರದಲ್ಲಿ ಹಸಿರು ರಾಶಿಯ ಮಧ್ಯೆ ನಿಂತ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಈ ಫೋಟೋಗೆ ‘ಹೋಗುವ ಸಮಯ ಬಂದಿದೆ’(ಇಟ್ಸ್ ಟೈಂ ಟು ಗೋ) ಎಂದು ಬರೆದುಕೊಂಡಿದ್ದರು. ಇದೀಗ ಅನ್ಸಿ ಬಾರದ ಲೋಕಕ್ಕೆ ತೆರಳಿದ್ದಾರೆ..!