ಇಂದು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್‍ಗೆ ಹುಟ್ಟುಹಬ್ಬದ ಸಂಭ್ರಮ 01-11-2021 4:55PM IST / No Comments / Posted In: Featured News, Live News, Entertainment ಇಂದು ಕರಾವಳಿ ಬೆಡಗಿ ಬಾಲಿವುಡ್ ಬ್ಯೂಟಿ ಕ್ವೀಟ್ ಐಶ್ವರ್ಯಾ ರೈ ಬಚ್ಚನ್ ಅವರ ಜನ್ಮದಿನ. 1973ರ ನವೆಂಬರ್ 1 ರಂದು ಮಂಗಳೂರಿನಲ್ಲಿ ಜನಿಸಿದ ಇವರು, ಇಂದು ವಿಶ್ವದ ಅತ್ಯಂತ ಸುಂದರ ಮಹಿಳೆಯರಲ್ಲಿ ಐಶ್ವರ್ಯಾ ಕೂಡ ಒಬ್ಬರು ಎಂದು ಪ್ರಶಂಸಿಸಲ್ಪಟ್ಟಿದ್ದಾರೆ. ದಶಕಗಳಿಂದ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಮುಖಾಂತರ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ಆಕೆಯ ಬೆರಗುಗೊಳಿಸುವ ನೋಟ, ಉತ್ತಮ ನಟನೆ, ಡ್ಯಾನ್ಸ್ ಇವೆಲ್ಲವೂ ಅಭಿಮಾನಿಗಳನ್ನು ಆಕರ್ಷಿಸಿದೆ. 48 ನೇ ವಯಸ್ಸಿನಲ್ಲಿ, ಐಶ್ವರ್ಯಾ ರೈ ಬಚ್ಚನ್ ಒಬ್ಬರು ನಟಿಯಾಗಿ, ಸೌಂದರ್ಯ ದೇವತೆಯಾಗಿ, ತಾಯಿ, ಹೆಂಡತಿಯಾಗಿ ತನ್ನ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ಐಶ್ವರ್ಯಾ ರೈ ಬಚ್ಚನ್ ಅವರ ತಮ್ಮ ಕುಟುಂಬದೊಂದಿಗಿನ ಕೆಲವು ವಿಶೇಷ ಫೋಟೋಗಳು ಇಲ್ಲಿವೆ..