alex Certify ದಿನಕ್ಕೆ 30 ಬಾರಿ ವಾಂತಿ ಮಾಡುವ ವಿಚಿತ್ರ ಕಾಯಿಲೆ ಹೊಂದಿದ್ದಾಳೆ ಈ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೆ 30 ಬಾರಿ ವಾಂತಿ ಮಾಡುವ ವಿಚಿತ್ರ ಕಾಯಿಲೆ ಹೊಂದಿದ್ದಾಳೆ ಈ ಯುವತಿ..!

ಇಂಗ್ಲೆಂಡ್​ನ ಲೀಡ್ಸ್​ ನಿವಾಸಿಯಾಗಿರುವ 27 ವರ್ಷದ ಯುವತಿಯು ವಿಚಿತ್ರವಾದ ಕಾಯಿಲೆಯೊಂದರಿಂದ ಬಳಲುತ್ತಿದ್ದು ಇದರಿಂದ ಸಾಕಷ್ಟು ನೋವನ್ನು ಅನುಭವಿಸುವಂತಾಗಿದೆ. ಗ್ಯಾಸ್ಟ್ರೋಪ್ಯಾರೆಸಿಸ್​ ಎಂಬ ಕಾಯಿಲೆ ಇದಾಗಿದ್ದು ಪರಿಣಾಮವಾಗಿ ಯುವತಿಯು ದಿನಕ್ಕೆ 30 ಬಾರಿ ವಾಂತಿ ಮಾಡುತ್ತಿದ್ದಾಳೆ..!

2016ರಲ್ಲಿ ಎಮಿಲಿ ವೆಬ್​ಸ್ಟರ್​​ ಅನಾರೋಗ್ಯಕ್ಕೀಡಾಗಿದ್ದರು. ಇದಾದ ಬಳಿಕ ಅವರ ಜೀವನ ಸಂಪೂರ್ಣವಾಗಿ ಬದಲಾಗಿ ಹೋಯ್ತು. ಎಮಿಲಿ ಕಳೆದ ಐದು ವರ್ಷಗಳಿಂದ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ.

ವೈದ್ಯರು ಮೊದಲ ಇದನ್ನು ಸಾಮಾನ್ಯ ಕಾಯಿಲೆ ಎಂದು ಹೇಳಿದ್ದರು. ಆದರೆ ಬಳಿಕ ಇದೊಂದು ಗುಣಪಡಿಸಲಾಗದಂತಹ ಸ್ಥಿತಿ ಎಂಬುದು ತಿಳಿದುಬಂತು ಎಂದು ಎಮಿಲಿ ಹೇಳಿದ್ದಾರೆ.

ವರದಿಗಳ ಪ್ರಕಾರ ಬ್ರಿಟನ್​​ನಲ್ಲಿ ಆರು ಪ್ರತಿಶತ ಜನಸಂಖ್ಯೆ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದೆ. ಇದೊಂದು ಅತ್ಯಂತ ವಿರಳ ಪ್ರಕರಣವಾಗಿದ್ದು ಹೊಟ್ಟೆ ಭಾಗವು ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿರುತ್ತದೆ. ಹೀಗಾಗಿ ಸಾಮಾನ್ಯ ಸ್ಥಿತಿಯಲ್ಲಿ ಆಹಾರವನ್ನು ಕರಗಿಸಿ ಹೊಟ್ಟೆ ಖಾಲಿ ಮಾಡಲು ಸಾಧ್ಯವಾಗೋದಿಲ್ಲ.

ಕಳೆದ ಕೆಲ ವರ್ಷಗಳ ಕಾಲ ಆಸ್ಪತ್ರೆಯಲ್ಲೇ ಜೀವನ ಸಾಗಿಸಿದ್ದ ಈಕೆ ನವೆಂಬರ್​ 11ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈಕೆಯ ದೇಹಕ್ಕೆ ಗ್ಯಾಸ್ಟ್ರಿಕ್​ಪೇಸ್​ಮೇಕರ್​ ಅಳವಡಿಸಲಾಗುತ್ತದೆ. ಬಳಿಕ ಅವರ ಜೀರ್ಣಾಂಗ ವ್ಯವಸ್ಥೆ ಸುಧಾರಿಸಲಿದೆ ಎನ್ನಲಾಗಿದೆ. ಅಂದಹಾಗೆ ಈ ಸರ್ಜರಿಯ ವೆಚ್ಚ ಬರೋಬ್ಬರಿ 9 ಲಕ್ಷ ರೂಪಾಯಿ ಆಗಿದೆ. ಎಮಿಲಿ ತನ್ನ ಶಸ್ತ್ರಚಿಕಿತ್ಸೆಗೆ ದೇಣಿಗೆ ಮೂಲಕ ಹಣ ಸಂಗ್ರಹಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಎಮಿಲಿ ಈ ಶಸ್ತ್ರಚಿಕಿತ್ಸೆಯು ನನ್ನ ಪಾಲಿಗೆ ಕ್ರಿಸ್​ಮಸ್​ ಉಡುಗೊರೆಯಾಗಲಿದೆ ಎಂದು ಭಾವಿಸಿದ್ದೇನೆ. ಕಳೆದ ಅನೇಕ ದಿನಗಳಿಂದ ನಾವು ಜೀವನದ ಅನೇಕ ಅಮೂಲ್ಯ ಕ್ಷಣಗಳನ್ನು ಮಿಸ್​ ಮಾಡಿಕೊಂಡಿದ್ದೇನೆ. ನನಗೆ ಸ್ನೇಹಿತರ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹಬ್ಬವನ್ನು ಆಚರಿಸಲು ಆಗುತ್ತಿರಲಿಲ್ಲ ಎಂದು ಹಳೆಯ ದಿನಗಳನ್ನು ನೆನೆದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...