ವಾಟ್ಸಾಪ್ ಚಾಟ್ನಲ್ಲಿ ಕ್ಯಾಮೆರಾ ಐಕಾನ್ ಪಕ್ಕದಲ್ಲೇ ರೂಪಾಯಿ ಐಕಾನ್ ಇರಿಸಿದ ವಾಟ್ಸಾಪ್ ಕಂಪನಿಯು ಇದೀಗ ತನ್ನ ಬಳಕೆದಾರರ ವಹಿವಾಟುಗಳಿಗೆ 51 ರೂಪಾಯಿಗಳ ಕೊಡುಗೆಯನ್ನು ನೀಡಲು ಮುಂದಾಗಿದೆ. ಈ ಮೂಲಕ ವಾಟ್ಸಾಪ್ನಲ್ಲೇ ಬಳಕೆದಾರರು ವ್ಯವಹಾರ ನಡೆಸಬೇಕು ಎಂದು ಪ್ರೋತ್ಸಾಹಿಸುತ್ತಿದೆ. ಗೂಗಲ್ ಪೇ ಹಾಗೂ ಫೋನ್ ಪೇನಂತಹ ಅಪ್ಲಿಕೇಶನ್ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ವಾಟ್ಸಾಪ್ ಗ್ರಾಹಕರನ್ನು ಸೆಳೆಯಲು ಈ ಪ್ಲಾನ್ ರೂಪಿಸಿದೆ.
ವಾಟ್ಸಾಪ್ ಪೇ ಎನ್ನುವುದು ಸುಲಭವಾಗಿ ಬಳಕೆ ಮಾಡಬಹುದಾದ ವೈಶಿಷ್ಟ್ಯವಾಗಿದ್ದು ಇದರ ಮೂಲಕ ಬಳಕೆದಾರರು ಹಣವನ್ನು ಸ್ವೀಕರಿಸಬಹುದು ಹಾಗೂ ಕಳುಹಿಸಬಹುದಾಗಿದೆ. ಇದೊಂದು ಯುಪಿಐ ಆಧರಿತ ವಹಿವಾಟಾಗಿದೆ. ವಾಟ್ಸಾಪ್ ಪೇ ಮೂಲಕ ಕಳುಹಿಸಿದ ಹಣವು ನೇರವಾಗಿ ನೀವು ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.
ವಾಟ್ಸಾಪ್ ಪೇಗೆ ಪ್ರಚಾರ ನೀಡಲು ಮುಂದಾಗಿರುವ ಕಂಪನಿಯು ಬಳಕೆದಾರರ ವ್ಯವಹಾರಗಳಿಗೆ 51 ರೂಪಾಯಿ ಕ್ಯಾಶ್ಬ್ಯಾಕ್ ನೀಡುತ್ತಿದೆ. ಈ ಆಫರ್ನ ಅವಧಿಯಲ್ಲಿ ನೀವು ಮಾಡಿದ ವಹಿವಾಟುಗಳಿಗೆ 51 ರೂಪಾಯಿ ಸಿಗಲಿದೆ. ಈ ಆಫರ್ನ್ನು ಪಡೆಯಲು ನೀವು ಬೇರೆಯವರಿಗೆ ಇಂತಿಷ್ಟೇ ಹಣ ಕಳುಹಿಸಬೇಕು ಎಂಬ ಷರತ್ತು ಇರೋದಿಲ್ಲ. ಇದಕ್ಕಾಗಿ ನೀವು ವಾಟ್ಸಾಪ್ ಪೇ ಸೌಲಭ್ಯವನ್ನು ಹೊಂದಿದ್ದರಷ್ಟೇ ಸಾಕು.
ವಾಟ್ಸಾಪ್ ಪೇ ಕ್ಯಾಶ್ಬ್ಯಾಕ್ ಪಡೆಯಲು ಇರುವ ಷರತ್ತುಗಳು
ಹಣ ಕಳುಹಿಸುವವರು ಹಾಗೂ ಪಡೆಯವವರು ಕಡ್ಡಾಯವಾಗಿ ವಾಟ್ಸಾಪ್ ಪೇನಲ್ಲಿ ನೊಂದಣಿಯಾಗಿರಬೇಕು.
ವಾಟ್ಸಾಪ್ ಖಾತೆ ಕನಿಷ್ಟ 30 ದಿನ ಹಳೆಯದಾಗಿರಬೇಕು.
ವಾಟ್ಸಾಪ್ ಬ್ಯುಸಿನೆಸ್ ಖಾತೆ ಹೊಂದಿರುವವರಿಗೆ ಈ ಸೌಲಭ್ಯ ಲಭ್ಯವಿಲ್ಲ.
ವಾಟ್ಸಾಪ್ನ ಇತ್ತೀಚಿನ ವರ್ಷನ್ ಹೊಂದಿರುವವರಿಗೆ ಮಾತ್ರ ಈ ಆಫರ್ ಇರಲಿದೆ.
ಈ ಆಫರ್ ಮೂಲಕ ನೀವು ಗರಿಷ್ಟ 5 ಬಾರಿ ಅಂದರೆ ಒಟ್ಟು 255 ರೂಪಾಯಿಗಳನ್ನು ಗಳಿಸಬಹುದಾಗಿದೆ.
ಐವರು ಬೇರೆ ಬೇರೆ ವಾಟ್ಸಾಪ್ ಪೇ ಬಳಕೆದಾರರಿಗೆ ನೀವು ಹಣ ಕಳುಹಿಸಬೇಕು.