ನವದೆಹಲಿ: ನವೆಂಬರ್ 1 ಸೋಮವಾರದಂದು ಸತತ ಆರನೇ ದಿನವೂ ಇಂಧನ ಬೆಲೆಗಳು ಏರಿಕೆಯಾಗಿದ್ದು, ದಾಖಲೆಯ ಮಟ್ಟಕ್ಕೆ ತಲುಪಿವೆ.
ತೈಲ ದರ 35 ಪೈಸೆಗಳಷ್ಟು ಏರಿಕೆಯಾಗಿ ದರ ಪರಿಷ್ಕರಣೆ ನಂತರ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, ರಾಷ್ಟ್ರೀಯ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕ್ರಮವಾಗಿ 109.69 ರೂ. ಮತ್ತು 98.42 ರೂ.ಗೆ ತಲುಪಿವೆ.
ವಿಮಾನಯಾನ ಟರ್ಬೈನ್ ಇಂಧನವನ್ನು(ATF ಅಥವಾ ಜೆಟ್ ಇಂಧನ) ವಿಮಾನಯಾನ ಸಂಸ್ಥೆಗಳಿಗೆ ಮಾರಾಟ ಮಾಡುವ ಬೆಲೆಗಿಂತ ಈಗ ಪೆಟ್ರೋಲ್ ಬೆಲೆ 32.79 ರೂ. ರಷ್ಟು ಹೆಚ್ಚು. ದೆಹಲಿಯಲ್ಲಿ ಎಟಿಎಫ್ ಪ್ರತಿ ಕಿಲೋ ಲೀಟರ್ಗೆ 82,638.79 ಅಥವಾ ಪ್ರತಿ ಲೀಟರ್ಗೆ ಸರಿಸುಮಾರು 82.6 ರೂ. ಆಗಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 115.50 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ಗೆ 106.62 ರೂ.ಗೆ ಮಾರಾಟವಾಗುತ್ತಿದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 106 ರೂ.ಗಿಂತ ಹೆಚ್ಚಾಗಿದ್ದು, ಪ್ರಸ್ತುತ ಪ್ರತಿ ಲೀಟರ್ಗೆ 106.35 ರೂ.ಗೆ ತಲುಪಿದೆ. ಡೀಸೆಲ್ ದರ 102.59 ರೂ. ಇದೆ.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ತೈಲ ಸಂಸ್ಕರಣಾಗಾರಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಂಡು ಪ್ರತಿದಿನ ಇಂಧನ ದರಗಳನ್ನು ಪರಿಷ್ಕರಿಸುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ದರ ಪರಿಷ್ಕರಣೆ ಬದಲಾವಣೆಗಳನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ತರಲಾಗುತ್ತದೆ.