ಚೆನ್ನೈ: ನಟ ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈ ನಗರದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆತಂಕದಲ್ಲಿದ್ದ ಅವರ ಅಭಿಮಾನಿಗಳಿಗೆ ಸಮಾಧಾನ ತಂದಿದೆ.
ಮನೆಗೆ ಮರಳಿದೆ ಎಂದು ತಮ್ಮ ಪೋಯಸ್ ಗಾರ್ಡನ್ ನಿವಾಸವನ್ನು ತಲುಪಿದ ನಂತರ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.
ಗುರುವಾರ ಸಂಜೆ ರಜನಿಕಾಂತ್ ಅವರನ್ನು ಇಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಅವರ ಕುಟುಂಬದವರು ಇದೊಂದು ವಾಡಿಕೆಯ ಮಾಸ್ಟರ್ ಹೆಲ್ತ್ ಚೆಕ್ ಅಪ್ ಎಂದು ಹೇಳಿದ್ದರು. ರಜನಿಗೆ ರಕ್ತ ಪೂರೈಸುವ ಕುತ್ತಿಗೆಯ ಮೇಲಿನ ಪ್ರಮುಖ ರಕ್ತನಾಳ, ಅಪಧಮನಿಯಿಂದ ಬ್ಲಾಕ್ಗಳನ್ನು ತೆಗೆದುಹಾಕಲಾಗಿದೆ.
ಗುರುವಾರ ಸಂಜೆ ತಲೆತಿರುಗುವಿಕೆ ಜಾಸ್ತಿಯಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 71 ರ ಹರೆಯದ ರಜನಿ ಚೇತರಿಸಿಕೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಕಾವೇರಿ ಆಸ್ಪತ್ರೆ ಹೇಳಿತ್ತು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸೂಪರ್ ಸ್ಟಾರ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.