ನಿಜ ಜೀವನದ ʼಮೌಗ್ಲಿʼ ಈಗ ಹೇಗಾಗಿದ್ದಾನೆ ಗೊತ್ತಾ..? 01-11-2021 9:37AM IST / No Comments / Posted In: Latest News, Live News, International ರುವಾಂಡಾದ ಜಂಜಿಮನ್ ಎಲ್ಲೀ ಎಂಬಾತನನ್ನು ನಿಜ ಜೀವನದ ಮೌಗ್ಲಿ ಎಂದು ಕರೆಯುತ್ತಾರೆ. ಸ್ಥಳೀಯರ ಹಿಂಸೆಯ ಕಾರಣದಿಂದ ಹೆಚ್ಚಿನ ಸಮಯವನ್ನು ಈತ ಕಾಡಿನಲ್ಲೇ ಕಳೆದಿದ್ದಾನೆ. 1999 ರಲ್ಲಿ ಜನಿಸಿದ 22 ವರ್ಷ ವಯಸ್ಸಿನ ಎಲ್ಲೀ, ಮೈಕ್ರೊಸೆಫಾಲಿ (ಮಗುವಿನ ತಲೆಯು ನಿರೀಕ್ಷೆಗಿಂತ ಚಿಕ್ಕದಾಗಿರುವ ಸ್ಥಿತಿ) ಎಂಬ ಖಾಯಿಲೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ತನ್ನ ಜೀವನದುದ್ದಕ್ಕೂ ಸ್ಥಳೀಯರಿಂದ ಅತ್ಯಂತ ಕಠೋರ ಸ್ಥಿತಿಯನ್ನು ಎದುರಿಸಬೇಕಾಯ್ತು. ಇದೀಗ ಜಂಜಿಮನ್ ಎಲ್ಲೀ ಸೂಟ್, ಬೂಟು ತೊಟ್ಟಿರುವ ಫೋಟೋ ವೈರಲ್ ಆಗಿದೆ. ವರದಿಗಳ ಪ್ರಕಾರ, ಎಲ್ಲೀಯು ರುವಾಂಡಾದ ಗಿಸೆನಿಯಲ್ಲಿರುವ ಉಬುಮ್ವೆ ಸಮುದಾಯ ಕೇಂದ್ರದ ವಿಶೇಷ ಮಕ್ಕಳ ಶಾಲೆಗೆ ದಾಖಲಾಗಿದ್ದಾನೆ. ಸೂಟ್, ಬೂಟ್ ಧರಿಸಿ ಎಲ್ಲೀ ತರಗತಿಗೆ ಹಾಜರಾಗಿದ್ದಾನೆ. ಮಗನ ಜೀವನ ಸರಿಹೋಗಿದ್ದನ್ನು ಕಂಡು ತಾಯಿ ಆನಂದಭಾಷ್ಪ ಹರಿಸಿದ್ದಾಳೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋಗಳು ಜಂಜಿಮನ್ ಸೂಟ್, ಧರಿಸಿ ನಗುತ್ತಾ ಫೋಸ್ ನೀಡುತ್ತಿರುವ ದೃಶ್ಯ ವೈರಲ್ ಆಗಿದೆ. 2020 ರಲ್ಲಿ ಪ್ರಾದೇಶಿಕ ಚಾನೆಲ್‌ನೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡ ಎಲ್ಲೀ ತಾಯಿ, ಈತನ ಜನನಕ್ಕೆ ಮೊದಲು ಐದು ಮಕ್ಕಳನ್ನು ಕಳೆದುಕೊಂಡಿದ್ದೆ ಎಂದು ಹೇಳಿದ್ದಳು. ನಂತರ ಜನಿಸಿದ ಎಲ್ಲೀ ಅಸಾಧಾರಣ ಮುಖದ ವೈಶಿಷ್ಟ್ಯಗಳನ್ನು ಹೊಂದಿದ್ದರಿಂದ ಸ್ಥಳೀಯರಿಂದ ವ್ಯಾಪಕವಾಗಿ ಅಪಹಾಸ್ಯಕ್ಕೊಳಗಾಗುತ್ತಿದ್ದನಂತೆ. ಎಲ್ಲೇ ಹೋದ್ರು ಜನರು ಈತನನ್ನು ಬೆನ್ನಟ್ಟಿಕೊಂಡು ಬರುತ್ತಿದ್ದರು ಎಂದು ತಾಯಿ ಬೇಸರ ತೋಡಿಕೊಂಡಿದ್ದಳು. ಇದೀಗ ಎಲ್ಲೀ ಹಾಗೂ ಆತನ ತಾಯಿಗೆ ಹಲವಾರು ಮಂದಿ ಸಹಕಾರ ನೀಡಿರುವುದರಿಂದ ಜೀವನ ಸುಗಮವಾದಂತಾಗಿದೆ. ಹೀಗಾಗಿ ಎಲ್ಲೀ ಶಾಲೆಯ ಮೆಟ್ಟಿಲನ್ನು ಹತ್ತೋದಕ್ಕೂ ಸಾಧ್ಯವಾಗಿದೆ. The story of Zanziman Ellie Mowgli transformation is inspirational, Everyone this a happy life, We can all work to eliminate stigmatization in our respective societies. pic.twitter.com/bQhwIm02Tf — Sammy Wanjala (@samsmoothke) October 28, 2021