ಬೆಂಗಳೂರು: ಕರ್ನಾಟಕದ 11 ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ಪದಕ ನೀಡಲಾಗಿದೆ. ವಿಶೇಷ ಕಾರ್ಯಾಚರಣೆಗೆ ನೀಡುವ ಕೇಂದ್ರ ಗೃಹಮಂತ್ರಿ ಪದಕವನ್ನು ಐಪಿಎಸ್ ಅಧಿಕಾರಿ ಸಂತೋಷ್ ಬಾಬು ಅವರಿಗೆ ಘೋಷಣೆ ಮಾಡಲಾಗಿದೆ.
ಇನ್ಸ್ ಪೆಕ್ಟರ್ ಗಳಾದ ಜಿ. ಬಾಲರಾಜ್ ಮತ್ತು ಪಿ. ಶಶಿಕುಮಾರ್, ಹೆಚ್.ವಿ. ಸುದರ್ಶನ್, ಎಸ್.ಆರ್. ಶ್ರೀಧರ್ ಅವರು ಪದಕ ಪಡೆದುಕೊಂಡಿದ್ದಾರೆ.
ಎಎಸ್ಐಗಳಾದ ಶೌಕತ್ ಅಲಿ, ಫಕ್ರುದ್ದೀನ್, ಅಕ್ಬರ್, ಸೋಮಶೇಖರ್, ಕೃಷ್ಣ ದೇವೇಗೌಡ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.