ಮಡಿಕೇರಿ: ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ, ಮಗ ಸಾವು ಕಂಡ ಘಟನೆ ಶ್ರೀಮಂಗಲ ಬಳಿ ನಡೆದಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ಕಾಲುಜಾರಿ ಹೊಳೆಗೆ ಬಿದ್ದು ತಾಯಿ, ಮಗ ಸಾವನ್ನಪ್ಪಿದ್ದಾರೆ.
32 ವರ್ಷದ ರೇವತಿ ಮತ್ತು 12 ವರ್ಷದ ಕಾರ್ಯಪ್ಪ ಮೃತಪಟ್ಟವರು ಎಂದು ಹೇಳಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.