ಈ ಬಾರಿ ಧನ್ ತೇರಸ್ ಗೆ ಕೇವಲ ಒಂದು ರುಪಾಯಿಗೆ ಚಿನ್ನದ ನಾಣ್ಯ ಖರೀದಿಸಬಹುದು. ಅದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಧನ್ ತೇರಸ್ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ಭಾರತೀಯರ ಸಂಪ್ರದಾಯವಾಗಿದೆ. ಸಾಂಕ್ರಾಮಿಕ ರೋಗದ ಸಂಕಷ್ಟದ ಸಂದರ್ಭದಲ್ಲಿ ಚಿನ್ನ ಖರೀದಿ ಗ್ರಾಹಕರಿಗೆ ಹೊರೆಯಾಗಿದೆ. ದುಡ್ಡು ಖರ್ಚು ಮಾಡಲು ಬಯಸದವರಿಗೆ ಕೇವಲ ಒಂದು ರೂಪಾಯಿಗೆ ಡಿಜಿಟಲ್ ಚಿನ್ನ ಖರೀದಿಸುವುದು ಉತ್ತಮ ಆಯ್ಕೆಯಾಗಿದೆ.
ಮೊಬೈಲ್ ವ್ಯಾಲೆಟ್‌ಗಳಾದ PayTM, Google Pay, Phone Pe ಕೇವಲ 1 ರೂಪಾಯಿಗೆ ಶೇಕಡ 99.99 ಶುದ್ಧ ಪ್ರಮಾಣೀಕೃತ ಚಿನ್ನವನ್ನು ನೀಡುತ್ತವೆ. ಜೊತೆಗೆ, HDFC ಬ್ಯಾಂಕ್ ಸೆಕ್ಯುರಿಟೀಸ್ ಅಥವಾ ಮೋತಿಲಾಲ್ ಓಸ್ವಾಲ್ ಗ್ರಾಹಕರು ಡಿಜಿಟಲ್ ಚಿನ್ನವನ್ನು ಸಹ ಖರೀದಿಸಬಹುದು. ಡಿಜಿಟಲ್ ಗೋಲ್ಡ್ ಇತ್ತೀಚೆಗೆ ಪ್ರಮುಖ ಹೂಡಿಕೆಯ ಸಾಧನವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ.
ಚಿನ್ನದ ನಾಣ್ಯವನ್ನು ಹೇಗೆ ಖರೀದಿಸುವುದು ಹೀಗೆ…
Google Pay ಖಾತೆಯನ್ನು ತೆರೆಯಿರಿ.
ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಿನ್ನದ ಆಯ್ಕೆಯನ್ನು ಆರಿಸಿ.
ಸಣ್ಣ ಪಾವತಿ ಮಾಡಿ ಮತ್ತು ನಿಮ್ಮ ಡಿಜಿಟಲ್ ಚಿನ್ನವನ್ನು ಖರೀದಿಸಿ.
ನಿಮ್ಮ ಖರೀದಿಗೆ ಶೇಕಡ 3 ಜಿಎಸ್‌ಟಿ ಕೂಡ ವಿಧಿಸಲಾಗುತ್ತದೆ.
ನಿಮ್ಮ ಚಿನ್ನದ ನಾಣ್ಯವನ್ನು ಮೊಬೈಲ್ ವ್ಯಾಲೆಟ್‌ನ ಚಿನ್ನದ ಲಾಕರ್‌ನಲ್ಲಿ ಭದ್ರಪಡಿಸಲಾಗುತ್ತದೆ.
ನೀವು ಚಿನ್ನವನ್ನು ಮಾರಾಟ ಮಾಡಬಹುದು, ವಿತರಿಸಬಹುದು ಅಥವಾ ಉಡುಗೊರೆಯಾಗಿ ನೀಡಬಹುದು.
ನೀವು ಚಿನ್ನವನ್ನು ಮಾರಾಟ ಮಾಡಲು ಬಯಸಿದರೆ, ಮಾರಾಟ ಬಟನ್ ಕ್ಲಿಕ್ ಮಾಡಿ.
ನೀವು ಅದನ್ನು ಉಡುಗೊರೆಯಾಗಿ ನೀಡಲು ಬಯಸಿದರೆ, ನಂತರ ಉಡುಗೊರೆ ಬಟನ್ ಮೇಲೆ ಕ್ಲಿಕ್ ಮಾಡಿ.
ಚಿನ್ನದ ನಾಣ್ಯ ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದು ಹೇಗೆ:-
ಹೋಮ್ ಡೆಲಿವರಿಗಾಗಿ, ಗ್ರಾಹಕರು ಕನಿಷ್ಠ ಅರ್ಧ ಗ್ರಾಂ ಡಿಜಿಟಲ್ ಚಿನ್ನವನ್ನು ನಾಣ್ಯಗಳು ಅಥವಾ ಬಾರ್‌ಗಳ ರೂಪದಲ್ಲಿ ಖರೀದಿಸಬೇಕು.
ಧನ್ ತೇರಸ್ 2021
ಧನ್ತೇರಸ್ ಅನ್ನು ಸಾಮಾನ್ಯವಾಗಿ ದೀಪಾವಳಿಯ ಎರಡು ದಿನಗಳ ಮೊದಲು ಆಚರಿಸಲಾಗುತ್ತದೆ. ಹೊಸ ಖರೀದಿಗೆ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಹಳದಿ ಲೋಹ ಅಥವಾ ಬೆಳ್ಳಿಯ ಮೇಲೆ ಹೂಡಿಕೆ ಮಾಡುವುದು ಸಮೃದ್ಧಿಯನ್ನು ತರುತ್ತದೆ ಎಂದು ಜನ ನಂಬುತ್ತಾರೆ. ಈ ವರ್ಷ ಧನ್ ತೇರಸ್ ಅನ್ನು ನವೆಂಬರ್ 2, ಮಂಗಳವಾರ ಆಚರಿಸಲಾಗುತ್ತದೆ.