ವಿಮಾನಗಳು ಟೇಕಾಫ್ ಆಗುವ ಮೊದಲು ವಿಮಾನದಲ್ಲಿ ಪ್ರಕಟಣೆ ಹೊರಡಿಸುವುದು ಸಾಮಾನ್ಯವಾಗಿದೆ. ಹೆಚ್ಚಾಗಿ ಇದನ್ನು ಪ್ರಯಾಣಿಕರು ನಿರ್ಲಕ್ಷಿಸುತ್ತಾರೆ. ಆದರೆ, ಇಂಡಿಗೋ ವಿಮಾನದಲ್ಲಿ ಸಿಬ್ಬಂದಿ ಭೋಜ್ಪುರಿಯಲ್ಲಿ ಪ್ರಕಟಿಸಿರುವ ವಿಡಿಯೋ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದಲ್ಲಿ ಭೋಜ್ಪುರಿ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಾರೆ. ಆದರೆ ವಿಮಾನದಲ್ಲಿ ಸಾಮಾನ್ಯವಾಗಿ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪ್ರಕಟಣೆಗಳನ್ನು ಹೊರಡಿಸಲಾಗುತ್ತದೆ.
ವಿಮಾನದ ಪೈಲೆಟ್ ಪ್ರಯಾಣಿಕರನ್ನು ಸ್ವಾಗತಿಸಿ, ನಂತರ ಸಿಬ್ಬಂದಿಯನ್ನು ಪರಿಚಯಿಸುತ್ತಾರೆ. ನಂತರ ಅವರು, ಭೋಜ್ಪುರಿಯಲ್ಲಿ ಮಾತನಾಡಲು ಆರಾಮವಾಗಿದ್ದೀರಾ ಎಂದು ಕೇಳಿದಾಗ, ಪ್ರಯಾಣಿಕರು ಥಮ್ಸ್ ಅಪ್ ಸನ್ನೆ ಮಾಡಿದ್ದಾರೆ.
ದೀಪಾವಳಿ ಮತ್ತು ಛತ್ ಪೂಜೆಯಿಂದಾಗಿ ಈ ಮಾರ್ಗದಲ್ಲಿ ಕಡಿಮೆ ಪ್ರಯಾಣಿಕರಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದ್ದು, 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಇಂಡಿಗೋ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ಹಾಗೂ ಬಿಹಾರಕ್ಕೆ ಹೋಗುವ ಎಲ್ಲಾ ವಿಮಾನದ ಸಿಬ್ಬಂದಿಗಳೂ ಭೋಜ್ಪುರಿಯಲ್ಲೇ ಮಾತನಾಡುವಂತೆ ಮನವಿ ಮಾಡಿದ್ದಾರೆ.
https://twitter.com/BBTheorist/status/1454160054299422727?ref_src=twsrc%5Etfw%7Ctwcamp%5Etweetembed%7Ctwterm%5E1454160054299422727%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-video-indigo-pilot-welcomes-passengers-in-bhojpuri-watch%2F827858