ಮಹಿಳೆಯರ ಶೌಚಾಲಯಕ್ಕೆ ತೆರಳಿದ ವ್ಯಕ್ತಿಯೊಬ್ಬ ಇನ್ಸ್ಟಾಗ್ರಾಂನಲ್ಲಿ ಆ ವಿಷಯವನ್ನು ಹಂಚಿಕೊಂಡಿದ್ದಾನೆ. ತಾನು ಹೆಂಗಸರ ಶೌಚಾಲಯದೊಳಗೆ ಹೋದಾಗ ಮಹಿಳೆಯರ ರಿಯಾಕ್ಷನ್ ಬಗ್ಗೆ ಹೊಗಳಿದ್ದಾನೆ.
ಮೊಹಮ್ಮದ್ ನಿಟೊಟೊ ಎಂಬಾತ ಹೆಣ್ಣುಮಗುವಿನ ತಂದೆಯಾಗಿದ್ದಾನೆ. ತನ್ನ ಪುತ್ರಿಯನ್ನು ಹೊರಗೆ ಕರೆದುಕೊಂಡು ಹೋದಾಗ ಪುರುಷರ ಟಾಯ್ಲೆಟ್ ಗೆ ಕರೆದುಕೊಂಡು ಹೋಗಲಾಗುವುದಿಲ್ಲ ಎಂದು ನಿಟೊಟೊ ಹೇಳಿದ್ದಾನೆ. ಹೀಗಾಗಿ ತನ್ನ ಮಗಳನ್ನು ಮಹಿಳೆಯರ ಶೌಚಾಲಯಕ್ಕೆ ಕರೆದುಕೊಂಡು ಬರುವುದು ಅನಿವಾರ್ಯವಾಗಿರುತ್ತದೆ.
ಮಹಿಳೆಯರ ಶೌಚಾಲಯದ ಒಳ ಹೊಕ್ಕುವ ಮುನ್ನ ಈತ ಬಾಗಿಲು ಬಡಿದು ಹೋಗುತ್ತಾನಂತೆ. ಮಹಿಳೆಯರ ಶೌಚಾಲಯ ಶುಚಿಯಾಗಿರುತ್ತದೆ ಎಂದು ಕೂಡ ತಿಳಿಸಿದ್ದಾನೆ. ಮಹಿಳೆಯರು ಕೂಡ ಒಂದು ಚೂರು ಕೋಪಗೊಳ್ಳದೆ ಗೌರವ ವ್ಯಕ್ತಪಡಿಸುತ್ತಾರೆ ಎಂಬುದಾಗಿ ತನ್ನ ಪೋಸ್ಟ್ ನಲ್ಲಿ ತಿಳಿಸಿದ್ದಾನೆ.