ಬೈಕ್ ಸ್ಟಂಟ್ ಮಾಡುವ ಯುವಕರೇ ಹುಷಾರ್….! ವ್ಹೀಲಿಂಗ್ ಮಾಡೋ ಮುನ್ನ ಈ ವಿಡಿಯೋ ನೋಡಿ 31-10-2021 12:17PM IST / No Comments / Posted In: Latest News, India, Live News ಒಂದು ಕ್ಷಣದ ಸುಖಕ್ಕಾಗಿ ಹಲವಾರು ಮಂದಿ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವ್ಹೀಲಿಂಗ್ ಮಾಡುವುದು ಅಪಾಯ ಎಂದು ಗೊತ್ತಿದ್ದರೂ ಯುವಜನತೆ ಬೈಕ್ ನಲ್ಲಿ ಸ್ಟಂಟ್ ಮಾಡುವುದನ್ನು ಕಡಿಮೆ ಮಾಡಿಲ್ಲ. ಹಾಗೆಯೇ ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಬ್ಯುಸಿ ರೋಡ್ ನ ನಡುವೆ ಬೈಕ್ ಸ್ಟಂಟ್ ಮಾಡಿ ಅಪಘಾತಕ್ಕೀಡಾಗಿದ್ದಾನೆ. ಬೈಕ್‌ನ ಹಿಂದೆ ಇದ್ದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ವ್ಯಕ್ತಿಯು ಬೈಕರ್ ಉಡುಪು ಹಾಗೂ ಹೆಲ್ಮೆಟ್‌ನಲ್ಲಿ ಗೊಪ್ರೊ ಕ್ಯಾಮರಾದೊಂದಿಗೆ ಮೋಟಾರ್‌ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದು ದ್ವಿಮುಖ ರಸ್ತೆಯಾಗಿದ್ದರೂ ಎರಡು ಬದಿಯ ನಡುವೆ ವಿಭಜಕ ಇರಲಿಲ್ಲ. ಈ ವೇಳೆ ನಿಯಂತ್ರಣ ಕಳೆದುಕೊಂಡ ಮೋಟಾರ್ ಬೈಕ್ ರೈಡರ್, ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಟ್ಯಾಂಕರ್‌ನ ಟೈರ್‌ಗೆ ಡಿಕ್ಕಿ ಹೊಡೆದು, ದೂರಕ್ಕೆ ಬಿದ್ದಿದ್ದಾನೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. #BeSafe💐ऐसा मत करना😢😢😢😢 Hero की Heropanti nikal gayi 😢😢😢@ipskabra @arunbothra @ipsvijrk pic.twitter.com/fHZ2mo7Rgb — Rupin Sharma IPS (@rupin1992) October 27, 2021