ಬೇಕಾಗುವ ಸಾಮಗ್ರಿಗಳು : ಈರುಳ್ಳಿ – 4, ಕೊತ್ತಂಬರಿ ಸೊಪ್ಪು – 1/2 ಕಪ್, ಹಸಿಮೆಣಸಿನಕಾಯಿ – 4, ಕರಿಬೇವು – 1 ಎಸಳು, ಕಡ್ಲೆ ಹಿಟ್ಟು – 1-2 ಕಪ್, ಎಣ್ಣೆ ಕರಿಯಲು, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಒಂದು ಪಾತ್ರೆ ತೆಗೆದುಕೊಳ್ಳಿ, ಇದಕ್ಕೆ ಕಡ್ಲೆ ಹಿಟ್ಟು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಕರಿಬೇವು, ಉಪ್ಪು ಹಾಕಿ ಬಳಿಕ ಅಳತೆಗೆ ತಕ್ಕಷ್ಟು ನೀರನ್ನು ಹಾಕಿ ಕಲಿಸಿಕೊಳ್ಳಿ. ಈ ಮಿಶ್ರಣಕ್ಕೆ ಉದ್ದವಾಗಿ ಹೆಚ್ಚಿಕೊಂಡ ಈರುಳ್ಳಿಯನ್ನು ಹಾಕಿ ಇನ್ನೊಮ್ಮೆ ಕಲಿಸಿ.
ಈಗ ಇನ್ನೊಂದು ಬಾಣಲೆಯಲ್ಲಿ ಎಣ್ಣೆಯನ್ನು ತೆಗೆದುಕೊಂಡು ಕಾಯಲು ಇಡಿ. ಎಣ್ಣೆ ಕಾದ ಬಳಿಕ ಮಧ್ಯಮ ಉರಿಯಲ್ಲಿ ಪಕೋಡಾವನ್ನು ಕರಿಯಿರಿ.
ಒಂದು ತಟ್ಟೆಯ ಮೇಲೆ ಟಿಶ್ಯೂ ಪೇಪರ್ ಇಟ್ಟು ಇದರ ಮೇಲೆ ಪಕೋಡಾವನ್ನು ಇರಿಸಿ, ಅದು ಎಣ್ಣೆಯನ್ನು ಹೀರಿಕೊಂಡ ಬಳಿಕ ಈ ಪಕೋಡಾವನ್ನು ಸಂಜೆಯ ಚಹದ ಜೊತೆ ಬಿಸಿಬಿಸಿಯಾಗಿ ಸರ್ವ್ ಮಾಡಿ.