ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿರುವುದಕ್ಕೆ ಸುದೀಪ್ ಸುದೀರ್ಘ ಬರಹ ಪೋಸ್ಟ್ ಮಾಡಿದ್ದಾರೆ. 13 ವರ್ಷದ ಬಳಿಕ ಟ್ವಿಟರ್ ಡಿಪಿ ಫೋಟೋ ಹಾಕಿರುವ ಸುದೀಪ್, ಒಬ್ಬ ಅಪೂರ್ವ ತಾರೆ ಎಂದು ಕೊಂಡಾಡಿದ್ದಾರೆ.
ಬಾಲ್ಯದಿಂದ ನಡೆದುಕೊಂಡುಬಂದ ನಮ್ಮ ಈ ಪಯಣ ಎಂದು ಸುದೀರ್ಘ ಪತ್ರವನ್ನು ಪೋಸ್ಟ್ ಮಾಡಿದ್ದಾರೆ. ಬಾಲ್ಯದಲ್ಲಿಯೇ ಪುನೀತ್ ಸ್ಟಾರ್ ಆಗಿದ್ದರು. ಚಿತ್ರರಂಗ ಇಂದು ಬರಿದಾಗಿದೆ. ಸಮಯ ಕ್ರೂರಿಯಂತೆ ಕಾಣುತ್ತಿದೆ. ಪ್ರಕೃತಿ ಕೂಡ ಶೋಕಾಚರಣೆಯಲ್ಲಿ ಇರುವಂತಿದೆ ಎಂದು ಹೇಳಿದ್ದಾರೆ.
ಮೊಟ್ಟಮೊದಲ ಬಾರಿಗೆ ನನಗೆ ಉಸಿರಾಟವೇ ಕಷ್ಟವಾಯಿತು. ಸಹೋದ್ಯೋಗಿ, ಸ್ನೇಹಿತ ಶಾಂತವಾಗಿ ಮಲಗಿರುವುದನ್ನು ಹೆಚ್ಚು ಹೊತ್ತು ನೋಡಲಾಗಲಿಲ್ಲ. ಆ ದೃಶ್ಯ ಈಗಲೂ ನನ್ನನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.