ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪುತ್ರಿ ಧೃತಿ ಬೆಂಗಳೂರಿಗೆ ಆಗಮಿಸಿ ತಂದೆಯ ದರ್ಶನ ಪಡೆದಿದ್ದಾರೆ. ಪುನೀತ್ ವಿಧಿವಶರಾದ ಸುದ್ದಿ ತಿಳಿದ ಕೂಡಲೇ ಅಮೆರಿಕದಿಂದ ಹೊರಟ ಧೃತಿ ಸತತ 20 ಗಂಟೆಗೂ ಅಧಿಕ ಕಾಲ ವಿಮಾನ ಪ್ರಯಾಣದ ನಂತರ ಬೆಂಗಳೂರಿಗೆ ಆಗಮಿಸಿದ್ದಾರೆ.
ವಿಮಾನ ನಿಲ್ದಾಣದಿಂದ ಸದಾಶಿವನಗರದ ನಿವಾಸಕ್ಕೆ ತೆರಳಿದ ಅವರು ಅಲ್ಲಿಂದ ಕುಟುಂಬದವರೊಂದಿಗೆ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದಾರೆ. ತಂದೆ ಕಂಡು ಭಾವುಕರಾದ ಅವರು ತಾಯಿ ಅಶ್ವಿನಿ, ಸಹೋದರಿ ವಂದಿತಾ ಅವರನ್ನು ತಬ್ಬಿ ಕಣ್ಣೀರಿಟ್ಟಿದ್ದಾರೆ. ಅಪ್ಪನ ತಲೆ ಮುಟ್ಟಿದ ಧೃತಿ ಪಾದಕ್ಕೆ ನಮಸ್ಕರಿಸಿದ್ದಾರೆ ತಾಯಿಯನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದಾರೆ.