ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ, ನನ್ನ ಸೋದರ, ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಕಂಠೀರವ ಸ್ಟೇಡಿಯಂ ನಲ್ಲಿ ಪುನೀತ್ ಅಂತಿಮ ದರ್ಶನ ಪಡೆದ ನಟ ಬಾಲಕೃಷ್ಣ, ಪುನೀತ್ ಅಗಲಿಕೆ ಆಘಾತ ತಂದಿದೆ. ನಾವು ಒಂದೇ ತಾಯಿ ಮಕ್ಕಳಾಗದಿದ್ದರೂ ಸೋದರರಂತಿದ್ದೆವು. ಸಣ್ಣ ವಯಸ್ಸಿನಲ್ಲಿಯೇ ಪುನೀತ್ ಬದುಕು ಮುಗಿಸಿ ತೆರಳಿರುವುದು ನೋವು ತಂದಿದೆ. ದೇವರು ಯಾಕೆ ಇಂತಹ ಅನ್ಯಾಯ ಮಾಡಿದರು ಎಂದು ದುಃಖವಾಗುತ್ತಿದೆ ಎಂದು ಗದ್ಗದಿತರಾದರು.
ಚಿರಂಜೀವಿ ಸರ್ಜಾರಿಂದ ಅಪ್ಪುವರೆಗೆ..! ಕನ್ನಡ ಚಿತ್ರರಂಗ ಇತ್ತೀಚೆಗೆ ಕಳೆದುಕೊಂಡ ನಟರಿವರು
ಪುನೀತ್ ಹಾಗೂ ಶಿವಣ್ಣ ಆಗಾಗ ಲೇಪಾಕ್ಷಿಗೆ ಬರುತ್ತಿದ್ದರು. ನಾನು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಪುನೀತ್ ಬರುತ್ತಿದ್ದರು. ಕಲಾವಿದನಾಗಿ ಮಾತ್ರವಲ್ಲ ಸಮಾಜ ಸೇವೆಯಲ್ಲಿಯೂ ಪುನೀತ್ ಅಗ್ರಗಣ್ಯರು. ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ಇಂದು ನಮ್ಮ ಕಣ್ಮುಂದೆ ಭೌತಿಕವಾಗಿ ಇರದಿರಬಹುದು ಆದರೆ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದು ಕಂಬನಿ ಮಿಡಿದಿದ್ದಾರೆ.