ಬೆಂಗಳೂರು: ಅಭಿಮಾನಿಗಳ ಮೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವಿಗೆ ಕಾರಣವಾಗಿದ್ದು ಮ್ಯಾಸಿವ್ ಆಂಟಿರಿಯರ್ ವಾಲ್ ಹೃದಯಾಘಾತ.
ಹೃದಯದ ಮೇಲ್ಭಾಗದಲ್ಲಿನ ಶೇಕಡ 60ರಷ್ಟು ಸ್ನಾಯು ಒಳಗೊಂಡ ಗೋಡೆಯನ್ನು ಆಂಟಿರಿಯರ್ ವಾಲ್ ಎನ್ನಲಾಗುತ್ತದೆ. ಹೃದಯದ ಈ ಕವಟಾಕ್ಕೆ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾಗಿ ಈ ರೀತಿಯ ಹೃದಯಾಘಾತ ಸಂಭವಿಸುತ್ತದೆ. ಅತಿಯಾದ ವ್ಯಾಯಾಮ ಮತ್ತು ಗೊತ್ತಿಲ್ಲದ ವ್ಯಾಯಾಮ ಮಾಡುವುದರಿಂದ ಈ ರೀತಿಯ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒತ್ತಡದಿಂದ ಕೆಲವೊಮ್ಮೆ ಈ ರೀತಿ ಹೃದಯಾಘಾತ ಆಗಬಹುದು ಎಂದು ಹೇಳಲಾಗಿದೆ.
ಯಾವುದೇ ಮುನ್ಸೂಚನೆ ನೀಡದೆ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಈ ರೀತಿಯ ಹೃದಯಘಾತ ಸಂಭವಿಸಬಹುದಾಗಿದೆ. 3 ಗಂಟೆಗೆ ಮೊದಲು ಇದು ಮುನ್ಸೂಚನೆ ನೀಡುತ್ತದೆ. ಅರ್ಧ ಗಂಟೆಗೂ ಅಧಿಕ ಸಮಯ ಹೃದಯದಲ್ಲಿ ನಿರಂತರವಾಗಿ ನೋವು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ಹೋಗಬೇಕು. ಯುವಕರಲ್ಲಿ ಈ ರೀತಿಯ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತದೆ ಎನ್ನುತ್ತಾರೆ ಜಯದೇವ ಆಸ್ಪತ್ರೆಗೆ ಮುಖ್ಯಸ್ಥರಾದ ಡಾ.ಸಿ.ಎನ್. ಮಂಜುನಾಥ್.
ಜಯದೇವ ಆಸ್ಪತ್ರೆಯಲ್ಲಿ 2017 ರಲ್ಲಿ ನಡೆದ ಯುವಜನರಲ್ಲಿ ಹೃದಯಾಘಾತ ಎನ್ನುವ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹೃದಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದ ಅವರಿಗೆ ಈ ರೀತಿ ಹೃದಯಾಘಾತವಾಗಿರುವುದನ್ನು ನಂಬಲಾಗುತ್ತಿಲ್ಲವೆಂದು ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.