ವಿವಾಹ ಸಮಾರಂಭಕ್ಕೆ ಅತಿಥಿಗಳನ್ನು, ನೆಂಟರನ್ನು ಆಹ್ವಾನಿಸುವುದು ಸಂಪ್ರದಾಯ. ಅವರು ಬಂದು ವಧು-ವರರನ್ನು ಆಶೀರ್ವದಿಸಿ, ಊಟ ಮಾಡಿದರೆ ನಮ್ಮ ಮನಸ್ಸಿಗೂ ಸಮಾಧಾನ. ಆದರೆ, ಡೆಸ್ಟಿನೇಷನ್ ವೆಡ್ಡಿಂಗ್ ಹೆಸರಿನಲ್ಲಿ ಜೋಡಿಗಳು ಸದ್ಯ ಗುಡ್ಡದ ತಪ್ಪಲು, ಐಷಾರಾಮಿ ರೆಸಾರ್ಟ್‌ಗಳಲ್ಲಿ ಮದುವೆಯಾಗುವ ರೂಢಿ ಹೆಚ್ಚಾಗುತ್ತಿದೆ. ಇಂಥದ್ದೇ ಒಂದು ವಿವಾಹವು ನ್ಯೂವೊ ಲಿಯಾನ್ ಎಂಬ ಗುಡ್ಡಗಾಡು ಪ್ರದೇಶದಲ್ಲಿ ನಡೆಯುತ್ತಿತ್ತು. ಘಮಘಮ ಊಟದ ವಾಸನೆ ಬರುತ್ತಿತ್ತು. ಹಾಗಾಗಿ ಅತಿಥಿಗಳ ಜತೆಗೆ ಊಟಕ್ಕೆ ಕಾಡಿನಿಂದ ಬಂದೇ ಬಿಟ್ಟಿತು ಕರಡಿ ಮರಿ !
ಶಾಲೆಗಳಲ್ಲಿ ಶನಿವಾರವೂ ಪೂರ್ಣ ತರಗತಿ: ಪಠ್ಯ ಕಡಿತವಿಲ್ಲ, ಶಿಕ್ಷಕರು ಒಪ್ಪಿದ್ರೆ ಶನಿವಾರ ಕ್ಲಾಸ್; ಸಚಿವ ನಾಗೇಶ್ ಮಾಹಿತಿ
ಹೌದು, ಆಹಾರ ತಡಕಾಡುತ್ತಿದ್ದ ಕರಡಿ ಗುಡ್ಡಗಾಡು ಅಲೆದು ವಿವಾಹ ಸಮಾರಂಭಕ್ಕೆ ನುಗ್ಗಿದೆ. ಅಲ್ಲಿ ಅತಿಥಿಗಳು ಮೊದಲು ಗಾಬರಿಗೊಂಡಿದ್ದಾರೆ. ಆದರೆ ಕರಡಿಯ ಸೌಮ್ಯ ಸ್ವಭಾವದಿಂದ ಸಮಾಧಾನ ತಂದುಕೊಂಡು ಅದಕ್ಕೆ ಅಗತ್ಯವಾದ ಆಹಾರವನ್ನು ಚೆನ್ನಾಗಿ ನೀಡಿದ್ದಾರೆ. ಬಹಳ ಖುಷಿಯಿಂದ ಹೊಟ್ಟೆ ತುಂಬ ತಿಂದ ಕರಡಿಯು, ಯಾರಿಗೂ ಅಪಾಯ ಮಾಡದೆಯೇ ಕೆಲವೇ ಕ್ಷಣದಲ್ಲಿ ಕಾಡಿಗೆ ಮರಳಿದೆ.
ತಿಂಗಳಿಗೆ 5 ಸಾವಿರ ರೂ.ವರೆಗೆ ಪಿಂಚಣಿ: ಅಟಲ್ ಪೆನ್ಷನ್ ಯೋಜನೆ ಖಾತೆದಾರರಿಗೆ ಗುಡ್ ನ್ಯೂಸ್
ಈ ಅಪರೂಪದ ವಿಡಿಯೊವನ್ನು ಟಿಕ್‌ಟಾಕ್‌ನಲ್ಲಿ ಏಗ್ನೀ ಡೈಯಾಸ್ ಎನ್ನುವವರು ಹಂಚಿಕೊಂಡಿದ್ದಾರೆ. ಅಮೆರಿಕದ ಫಾಕ್ಸ್ 11 ಸುದ್ದಿವಾಹಿನಿ ಕೂಡ ಈ ವಿಡಿಯೊ ಆಧರಿಸಿ ವರದಿ ಪ್ರಸಾರ ಮಾಡಿದೆ. ಛಿಪಿನ್‌ಕ್ಯೂ ವನ್ಯಜೀವಿ ಧಾಮದಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕರಡಿಯ ದಾಳಿಗೆ ಹೆದರಿ ಹಲವರು ತಟ್ಟೆ ಬಡಿಯುತ್ತಾ ಅದನ್ನು ಓಡಿಸಲು ಯತ್ನಿಸುತ್ತಿದ್ದರೆ, ಒಬ್ಬ ವೃದ್ಧರು ಮಾತ್ರ ತಮ್ಮ ಊಟವನ್ನು ನೆಮ್ಮದಿಯಿಂದ ಸವಿಯುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.