ಓಕ್ ಲೆಂಡ್: ಜನಪ್ರಿಯ ಜಾಲತಾಣ ಫೇಸ್ಬುಕ್ ಕಂಪನಿಗೆ ‘ಮೆಟಾವರ್ಸ್’ ಎಂದು ಮರು ನಾಮಕರಣ ಮಾಡಲಾಗಿದೆ.
ಮೆಟಾವರ್ಸ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಮಾಹಿತಿ ನೀಡಿದ್ದಾರೆ. ಫೇಸ್ಬುಕ್ ಕಂಪನಿ ಇನ್ನುಮುಂದೆ ಮೆಟಾರವರ್ಸ್ ಎಂದು ಬದಲಾಗಲಿದೆ. ಕಂಪನಿಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮಾರ್ಕ್ ಜುಕರ್ ಬರ್ಗ್ ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್ 100 ಕೋಟಿ ಜನರನ್ನು ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿಕೊಡುವ ಜೊತೆಗೆ ಜನರ ಸಂವಹನ, ಉತ್ಪನ್ನಗಳಿಗೆ ಮಾರುಕಟ್ಟೆ, ವಿವಿಧ ವಿಷಯಗಳ ಕುರಿತ ರಚನೆಗೆ ಅವಕಾಶ ನೀಡಲಿದೆ ಎಂದು ಹೇಳಿದ್ದಾರೆ.