ಧಾರವಾಡ: ಉಪಚುನಾವಣೆ ಅಖಾಡದಲ್ಲಿ ಕುರುಡು ಕಾಂಚಾಣದ ವಿಚಾರವಾಗಿ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಗಳ ನಡುವೆಯೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಯು.ಬಿ.ಶೆಟ್ಟಿ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಯು.ಬಿ.ಶೆಟ್ಟಿ ಅವರ ಧಾರವಾಡದ ಮನೆ ಮೇಲೆ ಗೋವಾದಿಂದ ಬಂದಿರುವ 5 ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
BIG NEWS: ʼಕನ್ನಡಕ್ಕಾಗಿ ನಾವುʼ ಅಭಿಯಾನಕ್ಕೆ ಚಾಲನೆ; ‘ಬಾರಿಸು ಕನ್ನಡ ಡಿಂಡಿಮವ’; ವಿಮಾನ ನಿಲ್ದಾಣ, ಮೆಟ್ರೋದಲ್ಲಿಯೂ ಮೊಳಗಿದ ಕನ್ನಡ ಕಲರವ
ಯು.ಬಿ.ಶೆಟ್ಟಿ ರಾಜ್ಯದ ಪ್ರತಿಷ್ಠಿತ ಗುತ್ತಿಗೆದಾರರಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಉಪ್ಪುಂದ ಗ್ರಾಮದವರಾಗಿದ್ದಾರೆ. ಡಿ.ಕೆ.ಶಿ ಅವರ ಆಪ್ತ ಎಂದು ಹೇಳಲಾಗಿದ್ದು, ಐವರು ಐಟಿ ಅಧಿಕಾರಿಗಳ ತಂಡ ಶೆಟ್ಟಿ ಅವರ ಮನೆಯಲ್ಲಿ ಪರಿಶೀಲನೆ ನಡೆಸಿದೆ.