ಮೈಸೂರು: ಕಂದಾಯ ಇಲಾಖೆಯ ವತಿಯಿಂದ ಅಕ್ಟೋಬರ್ 30 ರಂದು ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾ ಗಾಂಧಿ ವೃದ್ದಾಪ್ಯ ಯೋಜನೆ, ನಿರ್ಗತಿಕಾ ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮತ್ತು ಮೈತ್ರಿ ಯೋಜನೆಯ ಪಲಾನುಭವಿಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಮಂಜೂರಾತಿ ಆದೇಶದ ಪ್ರತಿಗಳನ್ನು ವಿತರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಲು ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೈಸೂರು ಜಿಲ್ಲೆ ಮತ್ತು ತಾಲ್ಲೂಕಿನ ಸಾರ್ವಜನಿಕರಿಗಾಗಿ ಪಿಂಚಣಿ ಅದಾಲತ್ ಕಾರ್ಯಕ್ರಮ ಅಂದು ಬೆಳಗ್ಗೆ 10 ಗಂಟೆಗೆ ಸಿದ್ಧಾರ್ಥ ಲೇಔಟ್ನ ಹಾಲಿನ ಡೈರಿ ಪಕ್ಕದಲ್ಲಿರುವ ಜಿಲ್ಲಾ ಗುರುಭವನದಲ್ಲಿ ನಡೆಯಲಿದೆ.
ಪಡೆಯುತ್ತಿದ್ದ ಪಿಂಚಣಿ ಸ್ಥಗಿತವಾಗಿದ್ದಲ್ಲಿ ಮಂಜೂರಾತಿ ಆದೇಶದಪ್ರತಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಅಂಚೆ ಕಚೇರಿಯ ಪಾಸ್ ಹಾಗೂ ಹೊಸದಾಗಿ ಮಂಜೂರಾತಿ ಸಲ್ಲಿಸಬೇಕಾದ ದಾಖಲಾತಿಗಳು ಆಧಾರ್ ಕಾರ್ಡ್ ಪ್ರತಿ, ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಅಂಚೆ ಕಚೇರಿ, ಬಿಪಿಎಲ್, ಪಡಿತರ ಚೀಟಿ, ಭಾವಚಿತ್ರ, ವಿಧವಾ ವಿವಾಹಕ್ಕೆ ಮರಣ ಪ್ರಮಾಣ ಪತ್ರ ಅಂಗವಿಕಲರ ವೇತನಕ್ಕೆ ಅಂಗವಿಕಲರ ಗುರುತಿನ ಚೀಟಿ ದಾಖಲಾತಿಗಳೊಂದಿಗೆ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರದ ಸವಲತ್ತುಗಳ ಪ್ರಯೋಜನ ಪಡೆಯಬಹುದು ಎಂದು ಮೈಸೂರು ತಾಲ್ಲೂಕಿನ ತಹಶೀಲ್ದಾರ್ ತಿಳಿಸಿದ್ದಾರೆ.