ಶ್ರೀಲಂಕಾದ ಗಾಯಕ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರ ಮನಿಕೆ ಮಾಗೆ ಹಿತೆ ಹಾಡು ಬಹಳ ಪ್ರಸಿದ್ಧಿ ಪಡೆದಿದೆ. ಈ ಹಾಡಿಗೆ ಸೆಲೆಬ್ರೆಟಿಗಳು ಸೇರಿದಂತೆ ಹಲವಾರು ಮಂದಿ ನೃತ್ಯ ಮಾಡಿದ್ದಾರೆ. ಇದೀಗ ಈ ಹಾಡಿಗೆ ಗರ್ಭಿಣಿಯೊಬ್ಬರು ನೃತ್ಯ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತ್ವಚೆಯ ʼಸೌಂದರ್ಯʼ ರಕ್ಷಣೆಗೆ ಇದು ಬೆಸ್ಟ್
ಸೀಮಂತ ಆಚರಣೆಯ ದಿನದಂದು ಗರ್ಭಿಣಿ ಮನಿಕೆ ಮ್ಯಾಗೆ ಹಿತೆಗೆ ನೃತ್ಯ ಮಾಡಿದ್ದಾರೆ. ಸೀರೆ, ಆಭರಣಗಳನ್ನು ತೊಟ್ಟು ಸುಂದರವಾಗಿ ಅಲಂಕಾರಗೊಂಡಿರುವ ಗರ್ಭಿಣಿ ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಸುಮಾರು 9 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ವಿಡಿಯೋ ಕಂಟೆಂಟ್ ಕ್ರಿಯೇಟರ್ ಕೃಷ್ಣ ಮಾಧುರಿ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
https://youtu.be/vVjlMDhcQ4M