ಒಂದು ಗಂಟೆಯಲ್ಲಿ 5,896 ಕೆ.ಜಿ. ತೂಕ ಎತ್ತಿ ಕ್ರೀಡಾಪಟುವಿನಿಂದ ʼಗಿನ್ನಿಸ್ʼ ದಾಖಲೆ 28-10-2021 7:17AM IST / No Comments / Posted In: Latest News, Live News, Sports ಒಂದು ಗಂಟೆಯಲ್ಲಿ ನೀವು ಎಷ್ಟು ತೂಕವನ್ನು ಎತ್ತಬಹುದು ? ಕೆನಡಾದ ಈ ಅಥ್ಲೀಟ್ ಕೇವಲ ಒಂದು ಗಂಟೆಯಲ್ಲಿ ಸುಮಾರು 13,000 ಪೌಂಡ್ಗಳನ್ನು (5896 ಕೆ.ಜಿ) ಎತ್ತಿ ಹೊಸ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ನೋಲನ್ ಡಿ ಲಿಯಾನ್ ಎಂಬುವವರು ಟರ್ಕಿಶ್ ಗೆಟ್-ಅಪ್ ಮೂಲಕ ಈ ನೂತನ ದಾಖಲೆಗೆ ಪಾತ್ರರಾಗಿದ್ದಾರೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮ್ಯಾನಿಟೋಬಾದ ಮೂಡ್ ಡಿಸಾರ್ಡರ್ಸ್ ಅಸೋಸಿಯೇಷನ್ ಅನ್ನು ಬೆಂಬಲಿಸಲು ಲಿಯಾನ್ ಈ ದಾಖಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಸ್ಯಾಂಡಲ್ ವುಡ್ ಗೆ ಈ ʼಅವತಾರʼದಲ್ಲಿ ಬರ್ತಿದ್ದಾನೆ ಅಧ್ಯಕ್ಷ ಛಾಯಾಗ್ರಾಹಕ ಮತ್ತು ಇಬ್ಬರು ತೀರ್ಪುಗಾರರ ಸಮ್ಮುಖದಲ್ಲಿ ಇವರು ಮಾಡಿದ ದಾಖಲೆಯನ್ನು ನೇರಪ್ರಸಾರ ಮಾಡಲಾಯಿತು. ಟರ್ಕಿಶ್ ಗೆಟ್-ಅಪ್ ಒಂದು ರೀತಿಯ ವ್ಯಾಯಾಮವಾಗಿದ್ದು, ಒಬ್ಬ ವ್ಯಕ್ತಿಯು ಕೆಟಲ್ ಬೆಲ್ ಅನ್ನು ಹಿಡಿಯುವಾಗ ನೆಲದ ಮೇಲೆ ಮಲಗಿರಬೇಕು. ವಿಡಿಯೋ ವೀಕ್ಷಿಸಿ: