ಸಾಮಾಜಿಕ ಜಾಲತಾಣ. ಸದ್ಯ ಎಲ್ಲರ ಅಚ್ಚುಮೆಚ್ಚಿನ ಜಾಗ. ಬೆಳಿಗ್ಗೆ ಹಾಸಿಗೆಯಲ್ಲಿರುವಾಗ್ಲೇ ಎಲ್ಲ ಜಾಲತಾಣಗಳನ್ನು ತಡಕಾಡುವ ಜನರು, ಬಹುತೇಕ ಸಮಯವನ್ನು ಇದ್ರಲ್ಲಿ ಕಳೆಯುತ್ತಿದ್ದಾರೆ.
ಒಂದು ಕಡೆ ಕುಳಿತು, ಇಡೀ ದಿನ ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡುವವರಿದ್ದಾರೆ. ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಾಮಾಜಿಕ ಜಾಲತಾಣ ತೊರೆದ್ರೆ ಸಾಧನೆ ಸುಲಭ ಎಂಬುದನ್ನು ಮಹಿಳೆಯೊಬ್ಬಳು ತೋರಿಸಿಕೊಟ್ಟಿದ್ದಾಳೆ.
ಉತ್ತರ ಲಂಡನ್ ನಿವಾಸಿ ಬ್ರೆಂಡಾ, ಸಾಮಾಜಿಕ ಜಾಲತಾಣದಿಂದ ದೂರವಿದ್ದು, ಆ ಸಮಯವನ್ನು ತೂಕ ಇಳಿಸಿಕೊಳ್ಳಲು ಬಳಸಿಕೊಂಡಿದ್ದಾಳೆ. ಒಂದು ವರ್ಷದಲ್ಲಿ ಆಕೆ 31 ಕೆ.ಜಿ. ತೂಕ ಇಳಿಸಿಕೊಂಡಿದ್ದಾಳೆ.
ಚಿಕ್ಕ ವಯಸ್ಸಿನಲ್ಲಿಯೇ ಬ್ರೆಂಡಾ ದಪ್ಪಗಿದ್ದಳಂತೆ. ಆದ್ರೆ 2019ರಲ್ಲಿ ಆಕೆ ತೂಕ ಮತ್ತಷ್ಟು ಹೆಚ್ಚಾಗಿತ್ತಂತೆ. ಲಾಕ್ ಡೌನ್ ವೇಳೆ ಮತ್ತಷ್ಟು ತೂಕ ಏರಿತ್ತು. ಇದಕ್ಕೆ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಕಾರಣ. ನಾನು ಅದ್ರಲ್ಲಿ ತೂಕ ಇಳಿಸಿಕೊಳ್ಳುವ ಮಾರ್ಗಗಳನ್ನು ವೀಕ್ಷಣೆ ಮಾಡ್ತಿದ್ದೆ. ಅದು ಖಿನ್ನತೆಗೆ ಕಾರಣವಾಗಿತ್ತು. ಇದ್ರಿಂದ ಕೋಪಗೊಂಡು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಡಿಲಿಟ್ ಮಾಡಿದೆ. ಇದಾದ ಕೆಲವೇ ದಿನಗಳಲ್ಲಿ ನನ್ನ ತೂಕ ಇಳಿಯಲು ಶುರುವಾಯ್ತು ಎಂದು ಬೆಂಡಾ ಹೇಳಿದ್ದಾಳೆ. ಬೆಂಡಾ, ಸಾಮಾಜಿಕ ಜಾಲತಾಣ ನೋಡುವ ಸಮಯದಲ್ಲಿ ವಾಕಿಂಗ್, ಆರೋಗ್ಯಕರ ಅಡುಗೆ ಮಾಡುತ್ತಾಳಂತೆ. ಉತ್ತಮ ಡಯಟ್ ತನ್ನ ತೂಕ ಇಳಿಯಲು ಕಾರಣವಾಗಿದೆ ಎಂದು ಆಕೆ ಹೇಳಿದ್ದಾಳೆ.