ಪಂಜಾಬ್ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಂದಿನ ನಡೆ ಏನು ಅನ್ನೋದರ ಬಗ್ಗೆ ಸಾಕಷ್ಟು ಚರ್ಚೆಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ಸಮಯ ಬಾಕಿ ಇರುವಾಗಲೇ ಕ್ಯಾ. ಅಮರೀಂದರ್ ಸಿಂಗ್ ಇಂದು ತಮ್ಮ ಹೊಸ ಪಕ್ಷವನ್ನು ಘೋಷಿಸಿದ್ದಾರೆ.
ಹೌದು..! ನಾನು ಹೊಸ ಪಕ್ಷವನ್ನು ಸ್ಥಾಪಿಸುತ್ತಿದ್ದೇನೆ. ಚುನಾವಣಾ ಆಯೋಗದಿಂದ ಸ್ಪಷ್ಟನೆ ಸಿಕ್ಕ ಬಳಿಕ ಹೊಸ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಘೋಷಿಸುತ್ತೇನೆ. ಈ ಸಂಬಂಧ ನಮ್ಮ ವಕೀಲರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಪಂಜಾಬ್ ಸಿಎಂ ಆಗಿ ನಾನು ಸಾಧಿಸಿದ ಸಾಧನೆಗಳ ಪಟ್ಟಿ ಇಲ್ಲಿದೆ. ಅಧಿಕಾರ ವಹಿಸಿಕೊಳ್ಳುವ ಮುನ್ನ ಜನತೆಗೆ ನೀಡಿದ ಪ್ರಣಾಳಿಕೆ ಹಾಗೂ ಇದರಲ್ಲಿ ನಾನು ಏನೆನೆಲ್ಲ ಸಾಧಿಸಿದ್ದೇನೆ ಎಂಬುದರ ಪ್ರಣಾಳಿಕೆಯನ್ನೂ ನಾನು ಇದರ ಜೊತೆಯಲ್ಲೇ ನೀಡುತ್ತಿದ್ದೇನೆ.
ಭದ್ರತಾ ಕ್ರಮಗಳ ಬಗ್ಗೆ ನನ್ನನ್ನು ಅಪಹಾಸ್ಯ ಮಾಡಲಾಗಿದೆ. ಆದರೆ ನಾನೊಬ್ಬ ಯೋಧ. ತರಬೇತಿ ಅವಧಿಯಿಂದ ನಿವೃತ್ತಿಯವರೆಗೆ ನಾನು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಹಾಗಾಗಿ ಭದ್ರತೆಯ ಮೂಲಭೂತ ಅವಶ್ಯಕತೆಗಳ ಬಗ್ಗೆ ನಾನು ಚೆನ್ನಾಗಿಯೇ ತಿಳಿದಿದ್ದೇನೆ ಎಂದು ಹೇಳಿದ್ರು.
ಬರೋಬ್ಬರಿ 9.5 ವರ್ಷಗಳ ಕಾಲ ನಾನು ಪಂಜಾಬ್ ಗೃಹ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ 1 ತಿಂಗಳು ಗೃಹ ಸಚಿವರಾಗಿ ಸೇವೆ ಸಲ್ಲಿಸಿದವರು ನನಗಿಂತ ಜಾಸ್ತಿ ತಿಳಿದವರಂತೆ ಮಾತನಾಡುತ್ತಾರೆ. ಗೊಂದಲದ ಪಂಜಾಬ್ ಯಾರಿಗೂ ಬೇಕಾಗಿಲ್ಲ. ಪಂಜಾಬ್ನ ಕಷ್ಟದ ಸಮಯದಲ್ಲೂ ನಾವಿದ್ದೇವು ಅನ್ನೋದನ್ನು ಅವರೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ನೀಡಿದ್ರು.