ರೈಲು ಪ್ರಯಾಣವನ್ನು ಸುರಕ್ಷಿತಗೊಳಿಸುವುದು ರೈಲ್ವೆ ಇಲಾಖೆ ಜವಾಬ್ದಾರಿ. ರೈಲು ಪ್ರಯಾಣವನ್ನು ಸುರಕ್ಷಿತಗೊಳಿಸಲು ರೈಲ್ವೆ ಮಹತ್ವದ ಹೆಜ್ಜೆಯಿಟ್ಟಿದೆ. ಹಬ್ಬ ಹರಿದಿನಗಳಲ್ಲಿ ರೈಲಿನಲ್ಲಿ ಜನಸಂದಣಿ ಹೆಚ್ಚುತ್ತಿದೆ. ರೈಲಿನಲ್ಲಿ ಬೆಂಕಿ ಅಥವಾ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೈಲ್ವೆ, ಪ್ರಯಾಣಿಕರಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಇಲಾಖೆ ನಿಯಮವನ್ನು ಮುರಿದ್ರೆ ಪ್ರಯಾಣಿಕರಿಗೆ ಕಠಿಣ ಶಿಕ್ಷೆಯಾಗಲಿದೆ.
ರೈಲ್ವೆ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಯಾವುದೇ ಸುಡುವ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ರೈಲ್ವೆ ಇಲಾಖೆ ಹೇಳಿದೆ. ರೈಲಿನಲ್ಲಿ ಬೆಂಕಿಯನ್ನು ಹರಡುವ ಅಥವಾ ದಹಿಸುವ ವಸ್ತುಗಳನ್ನು ಸಾಗಿಸುವುದು ರೈಲ್ವೆ ಕಾಯಿದೆ, 1989 ರ ಸೆಕ್ಷನ್ 164 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.
ಲಖೀಂಪುರ ಖೇರಿ ಹಿಂಸಾಚಾರ: ಪ್ರತ್ಯಕ್ಷದರ್ಶಿಗಳ ಸಂಪೂರ್ಣ ಮಾಹಿತಿ ನೀಡಿದ ಎಸ್ಐಟಿ
ಈ ವಸ್ತುಗಳೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ರೈಲಿನಲ್ಲಿ ಸೀಮೆಎಣ್ಣೆ, ಪೆಟ್ರೋಲ್, ಪಟಾಕಿ ಮತ್ತು ಗ್ಯಾಸ್ ಸಿಲಿಂಡರ್‌ಗಳಂತಹ ದಹನಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು. ಅಥವಾ ಬೇರೆಯವರಿಗೆ ತೆಗೆದುಕೊಂಡು ಹೋಗುವಂತೆ ಸೂಚಿಸಬಾರದು.
ಸೀಮೆಎಣ್ಣೆ, ಒಣ ಹುಲ್ಲು, ಒಲೆ, ಪೆಟ್ರೋಲ್, ಸೀಮೆಎಣ್ಣೆ, ಗ್ಯಾಸ್ ಸಿಲಿಂಡರ್, ಬೆಂಕಿಕಡ್ಡಿಗಳು, ಪಟಾಕಿ ಅಥವಾ ರೈಲು ವಿಭಾಗದಲ್ಲಿ ಬೆಂಕಿ ಹರಡುವ ಯಾವುದೇ ವಸ್ತುವಿನೊಂದಿಗೆ ಪ್ರಯಾಣಿಸುವಂತಿಲ್ಲ. ಪ್ರಯಾಣಿಕರ ಪ್ರಯಾಣವನ್ನು ಸುರಕ್ಷಿತವಾಗಿಸಲು ರೈಲ್ವೆ ಈ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ ಎಂದು ರೈಲ್ವೆ ಟ್ಟೀಟ್ ಮಾಡಿದೆ.
ಕ್ರಿಯಾತ್ಮಕ ಪೋಸ್ಟ್ ಮೂಲಕ ʼಸೈಬರ್ ಭದ್ರತೆʼ ಮಹತ್ವ ತಿಳಿಸಿದ ಮುಂಬೈ ಪೊಲೀಸ್
ಇಷ್ಟೇ ಅಲ್ಲ, ರೈಲಿನಲ್ಲಿ ಅಥವಾ ರೈಲು ನಿಲ್ದಾಣದಲ್ಲಿ ಧೂಮಪಾನ ಮಾಡುವುದು ಕೂಡ ಅಪರಾಧ. ಸಿಕ್ಕಿಬಿದ್ದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ದಂಡ ಪಾವತಿಸಬೇಕಾಗುತ್ತದೆ.