ಇಲ್ಲೊಬ್ಬ ಮಹಿಳೆ ಒಂದೇ ದಿನಾಂಕದಲ್ಲಿ ಮೂರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ಹಾಗೂ ಇನ್ನೊಂದು ಆಶ್ಚರ್ಯವೆಂದರೆ, ನಿಖರವಾಗಿ ಮೂರು ವರ್ಷಗಳ ಅಂತರದಲ್ಲಿ ಈ ಮಕ್ಕಳು ಜನಿಸಿದ್ದಾರೆ.
ಕ್ರಿಸ್ಟಿನ್ ಲ್ಯಾಮರ್ಟ್ ಎಂಬಾಕೆ ತನ್ನ ಹೆಣ್ಣುಮಕ್ಕಳಿಗೆ ಆಗಸ್ಟ್ 25 ರಂದು ಜನ್ಮ ನೀಡಿದ್ದಾಳೆ. 2015ರಲ್ಲಿ ಸೋಫಿಯಾ, 2018 ರಲ್ಲಿ ಗಿಯುಲಿಯಾನಾ ಮತ್ತು 2021 ರಲ್ಲಿ ಮಿಯಾ ಜನಿಸಿದ್ದಾಳೆ. ಕ್ರಿಸ್ಟಿನ್ ತನ್ನ ಹೆಣ್ಣುಮಕ್ಕಳಿಗೆ ಒಂದೇ ದಿನದಲ್ಲಿ ಜನ್ಮ ನೀಡಬೇಕೆಂದು ನಿರೀಕ್ಷಿಸಿರಲಿಲ್ಲ. ಎಲ್ಲಾ ಮೂರು ಮಕ್ಕಳ ಡೆಲಿವರಿಯು ಪ್ರತ್ಯೇಕ ದಿನಾಂಕಗಳನ್ನು ಹೊಂದಿತ್ತಂತೆ.
ಯಾವುದೇ ತೊಡಕುಗಳಿಲ್ಲದ ಕಾರಣ ಮೊದಲ ಪುತ್ರಿ ಸೋಫಿಯಾಳ, ಕ್ರಿಸ್ಟಿನ್ ಗರ್ಭಾವಸ್ಥೆಯು ಸುಲಭವಾಗಿತ್ತು. ಡೆಲಿವರಿಯ ಅಂತಿಮ ದಿನಾಂಕವು ಆಗಸ್ಟ್ 23, 2015 ಆಗಿತ್ತು. ಆದರೆ, ಅವಳು ಆಗಸ್ಟ್ 25 ರಂದು ಎರಡು ದಿನ ತಡವಾಗಿ ಜನಿಸಿದ್ದಳು ಎಂದು ಕ್ರಿಸ್ಟಿನ್ ತಿಳಿಸಿದ್ದಾಳೆ.
ಕ್ರಿಸ್ಟಿನ್ ಅವರ ಎರಡನೇ ಗರ್ಭಧಾರಣೆಯು ಸ್ವಲ್ಪ ಹೆಚ್ಚು ಸವಾಲಾಗಿತ್ತಂತೆ. ಏಕೆಂದರೆ ಅವರು ಅನುಭವಿಸಿದ ನಿರಂತರ ವಾಕರಿಕೆ. ಗರ್ಭಿಣಿಯಾಗಿದ್ದ ಕ್ರಿಸ್ಟಿನ್ ಗೆ ರಕ್ತದೊತ್ತಡ ಸ್ವಲ್ಪ ಹೆಚ್ಚಿತ್ತು. ಎರಡನೇ ಪುತ್ರಿ ಗಿಯುಲಿಯಾನಾ ಜನಿಸಬೇಕಿದ್ದ ದಿನಾಂಕವು ಆಗಸ್ಟ್ 29, 2018 ಆಗಿತ್ತು. ಆದರೆ ಅವಳು ನಾಲ್ಕು ದಿನಗಳ ಮುಂಚಿತವಾಗಿ ಜನಿಸಿದಳು.
ಇನ್ನು ಮಿಯಾಗೆ ಗರ್ಭಿಣಿಯಾಗಿದ್ದಾಗ, ಕ್ರಿಸ್ಟಿನ್ ಗೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತಂತೆ. ಗರ್ಭಧಾರಣೆಯ ಕೊನೆಯ ದಿನಗಳಲ್ಲಿ ಆಕೆ ಅಧಿಕ ರಕ್ತದೊತ್ತಡ, ನಿರಂತರ ತಲೆನೋವು ಮತ್ತು ವಿಪರೀತ ಊತವನ್ನು ಅನುಭವಿಸಿದಳಂತೆ. ಮಿಯಾ ಸೆಪ್ಟೆಂಬರ್ 8, 2021 ರಂದು ಬರಬೇಕಾಗಿತ್ತು. ಆದರೆ ಈ ಮಗು ಕೂಡ 14 ದಿನಗಳು ಮುಂಚಿತವಾಗಿ ಅಂದರೆ ಆಗಸ್ಟ್ 25 ರಂದು ಜನಿಸಿದ್ದಾಳೆ. ಇದು ನಂಬಲಾರದಷ್ಟು ವಿಶೇಷವಾಗಿದೆ ಎಂದು ಕ್ರಿಸ್ಟಿನ್ ಹೇಳಿದ್ದಾಳೆ.
“ಮೂರು ವರ್ಷಗಳ ಅಂತರದಲ್ಲಿ ಮೂರು ಮಕ್ಕಳನ್ನು ಹೊಂದಲು ಬಯಸಿದ್ದೆವು. ಆದರೆ ಅದೇ ಜನ್ಮ ದಿನಾಂಕದಂದು ಹುಟ್ಟುತ್ತಾರೆ ಎಂಬುದನ್ನು ನಾವು ಯಾವತ್ತೂ ಯೋಜಿಸಲಿಲ್ಲ” ಎಂದು ಕ್ರಿಸ್ಟೀನ್ ಹೇಳಿದ್ದಾರೆ.
ಇನ್ನು ವಿಚಿತ್ರವೆಂದರೆ, ಕ್ರಿಸ್ಟಿನ್ ಅವರ ಮನೆಯ ನಾಯಿ ಕೂಡ ಆಗಸ್ಟ್ 25 ರಂದು ಹುಟ್ಟುಹಬ್ಬವನ್ನು ಹೊಂದಿದೆಯಂತೆ. ಹಾಗೂ ಈ ವರ್ಷ 16ನೇ ವರ್ಷಕ್ಕೆ ಕಾಲಿಟ್ಟಿರುವುದಾಗಿ ಕ್ರಿಸ್ಟೀನ್ ಹೇಳಿದ್ದಾರೆ.