ಹೆಚ್ಚಾಗಿ ಮಹಿಳೆಯರಿಗೆ ಶಾಪಿಂಗ್ ಹುಚ್ಚು ತುಸು ಜಾಸ್ತಿ ಇರುತ್ತದೆ. ಇವಾಗಂತೂ ಇ ಕಾಮರ್ಸ್ ವೆಬ್ ಸೈಟ್ ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಹಾಗಾಗಿ ನಮಗೆ ಬೇಕಾದುದನ್ನು ಪಡೆಯಲು ನಾವು ಅಂಗಡಿ ಅಥವಾ ಮಾಲ್ ಗೆ ಹೋಗಬೇಕೆಂದಿಲ್ಲ. ಮನೆ ಬಾಗಿಲಿಗೇ ವಸ್ತುಗಳು ಬರುತ್ತವೆ. ಆದರೆ, ಶಾಪಿಂಗ್ ಜಾಸ್ತಿ ಮಾಡಿ, ಗಂಡನಿಂದ ಬೈಗುಳ ಎದುರಿಸಬೇಕಾಗುತ್ತದೆ ಎಂದು ಹೆದರಿದ ಮಹಿಳೆಯೊಬ್ಬಳು ಏನು ಉಪಾಯ ಮಾಡಿದ್ದಾಳೆ ಗೊತ್ತಾ..?
ಆನ್ಲೈನ್ನಲ್ಲಿ ಶಾಪಿಂಗ್ ಮಾಡಿದ ಓರ್ವ ಮಹಿಳೆಯು ತನ್ನ ಪತಿಗೆ ಈ ವಿಷಯ ಗೊತ್ತಾಗಬಾರದೆಂದು ಒಂದು ಯೋಜನೆ ರೂಪಿಸಿದ್ದಾಳೆ. ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಟಿಕ್ಟಾಕ್ ವಿಡಿಯೋದಲ್ಲಿ, ತನ್ನ ಪತಿಯಿಂದ ಪಾರ್ಸೆಲ್ ಅನ್ನು ಮರೆಮಾಡಲು ಗ್ರಾಹಕರ ರಹಸ್ಯ ವಿನಂತಿಯನ್ನು ಅನುಸರಿಸುತ್ತಿರುವ ಡೆಲಿವರಿ ಡ್ರೈವರ್ನ ತುಣುಕನ್ನು ತೋರಿಸಲಾಗಿದೆ. 35 ಸೆಕೆಂಡುಗಳ ವಿಡಿಯೋವನ್ನು ಒಕ್ಲಹೋಮಾದ ತಲ್ಸಾ ನಿವಾಸಿ ಚೆರ್ರಿ ಲಾಂಗಬರ್ಗರ್ ಎಂಬುವವರು ಅಪ್ಲೋಡ್ ಮಾಡಿದ್ದಾರೆ.
ಹಬ್ಬದ ಹೊತ್ತಲ್ಲೇ ಡಿಎ ಹೆಚ್ಚಳ ಖುಷಿಯಲ್ಲಿದ್ದ ನೌಕರರಿಗೆ ಮುಖ್ಯ ಮಾಹಿತಿ
ಅಮೆಜಾನ್ ಡ್ರೈವರ್ ಪಾರ್ಸೆಲ್ ತಲುಪಿಸಲು ಏನು ಮಾಡಿದ್ದಾಳೆ ಎಂಬುದನ್ನು ಚೆರ್ರಿಯ ಮನೆಯ ಭದ್ರತಾ ಕ್ಯಾಮರಾ ಸೆರೆಹಿಡಿಯುವುದನ್ನು ವಿಡಿಯೋದಲ್ಲಿ ನೋಡಬಹುದು. ಅಮೆಜಾನ್ ಡೆಲಿವರಿ ಏಜೆಂಟ್ ಪ್ಯಾಕೇಜನ್ನು ಮನೆ ಮುಂಭಾಗ ಇಡಲು ಮುಂದಾಗಿದ್ದಾಳೆ. ಆದರೆ, ಮಹಿಳೆಯು ಮನೆಯ ಪ್ರವೇಶ ದ್ವಾರದಲ್ಲಿ ‘ದಯವಿಟ್ಟು, ಪತಿಯಿಂದ ಪ್ಯಾಕೇಜ್ಗಳನ್ನು ಮರೆಮಾಡಿ’ ಎಂದು ಬರೆಯಲಾಗಿದ್ದ ಬರಹವನ್ನು ಆಕೆ ಗಮನಿಸಿದ್ದಾಳೆ.
ದಾರಿ ತಪ್ಪಿದರೂ ರಕ್ಷಣಾ ತಂಡದ ಕರೆ ಸ್ವೀಕರಿಸಿರಲಿಲ್ಲ ಭೂಪ…! ನಗು ತರಿಸುತ್ತೆ ಇದರ ಹಿಂದಿನ ಕಾರಣ
ಕೂಡಲೇ ಇದನ್ನು ಅರ್ಥಮಾಡಿಕೊಂಡ ಅಮೆಜಾನ್ ಡೆಲಿವರಿ ಏಜೆಂಟ್, ಸೂಕ್ತವಾದ ಅಡಗುತಾಣಕ್ಕಾಗಿ ಸುತ್ತಲೂ ನೋಡಿದ್ದಾಳೆ. ಹಾಗೂ ಪ್ಯಾಕೇಜ್ ಅನ್ನು ಬಾಗಿಲಿನ ಪಕ್ಕದ ಹೆಡ್ಜ್ನಲ್ಲಿ ತುಂಬಲು ನಿರ್ಧರಿಸಿದ್ದಾನೆ. ಸುರಕ್ಷಿತವಾಗಿ ಇರಿಸಿದ ನಂತರ, ವಿತರಣಾ ಏಜೆಂಟ್ ಪ್ಯಾಕೇಜ್ನ ಚಿತ್ರವನ್ನು ತೆಗೆದುಕೊಂಡು ಹೋಗುವುದನ್ನು ಕಾಣಬಹುದು. ಈ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಳ್ಳಲಾಗಿದ್ದು, 1.7 ಮಿಲಿಯನ್ ಲೈಕ್ಗಳು ಬಂದಿವೆ. ಅಲ್ಲದೆ ಅಮೆಜಾನ್ ಡೆಲಿವರಿ ಏಜೆಂಟ್ ಅನ್ನು ನೆಟ್ಟಿಗರು ಪ್ರಶಂಸಿದ್ದಾರೆ.
https://www.youtube.com/watch?v=qRrXRM4tLac&t=28s