ಭುವನೇಶ್ವರದಲ್ಲಿರುವ ಗೋಪಬಂಧು ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ನ ಹಾಸ್ಟೆಲ್ ಬ್ಲಾಕ್ನಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಭಾನುವಾರ, ಸಂಸ್ಥೆಯ ನೌಕರರು ಅಡುಗೆ ಮನೆಯಲ್ಲಿ ಪಾತ್ರೆಗಳ ಕೆಳಗೆ 4 ಅಡಿ ಉದ್ದದ ನಾಗರಹಾವು ಇರುವುದನ್ನು ಗಮನಿಸಿದ್ದಾರೆ.
ಕೂಡಲೇ ನಾಗರಹಾವು ಇರುವ ಬಗ್ಗೆ ಆಡಳಿತಾಧಿಕಾರಿ ಸೇರಿದಂತೆ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಬಳಿಕ ಪ್ರಧಾನ ಕಾರ್ಯದರ್ಶಿ ಸುಭೇಂದು ಮಲ್ಲಿಕ್ ಅವರು ಸ್ನೇಕ್ ಹೆಲ್ಪ್ಲೈನ್ ಗೆ ಕರೆ ಮಾಡಿ ಉರಗತಜ್ಞ ಪೂರ್ಣಚಂದ್ರ ದಾಸ್ ಅವರನ್ನು ನಾಗರಹಾವು ಹಿಡಿಯಲು ಕರೆಸಲಾಗಿದೆ.
ಇನ್ಸ್ಟಿಟ್ಯೂಟ್ ಆವರಣವನ್ನು ತಲುಪಿದ ದಾಸ್, ಅಡುಗೆಮನೆಯಲ್ಲಿದ್ದ ನಾಗರಹಾವನ್ನು ಹಿಡಿದು ಚೀಲದೊಳಗೆ ಹಾಕಿದ್ದಾರೆ. ನಂತರ, ಹಾವನ್ನು ನಗರದ ಹೊರವಲಯಕ್ಕೆ ತೆಗೆದುಕೊಂಡು ಹೋಗಿ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಯಿತು. ಘಟನೆಯಿಂದ ಹಾವಿಗೆ ಯಾವುದೇ ರೀತಿಯ ಗಾಯವಾಗಿಲ್ಲ, ಅದು ಸುರಕ್ಷಿತವಾಗಿದೆ. ಅದೃಷ್ಟವಶಾತ್, ಸಮಯೋಚಿತವಾಗಿ ಗುರುತಿಸಿ ಹಾವನ್ನು ರಕ್ಷಿಸಲಾಯಿತು.
ಜೂನ್ನಲ್ಲಿ, ಒಡಿಶಾ ಸರ್ಕಾರವು ವನ್ಯಜೀವಿ (ರಕ್ಷಣೆ) ಕಾಯಿದೆ 1972 ರ ನಿಬಂಧನೆಗಳ ಪ್ರಕಾರ 41 ಹೊಸ ಗೌರವ ವನ್ಯಜೀವಿ ವಾರ್ಡನ್ಗಳನ್ನು (ಹೆಚ್ ಡಬ್ಲ್ಯೂ ಡಬ್ಲ್ಯೂ) ನೇಮಿಸಿದೆ. ಅವರನ್ನು ಎರಡು ವರ್ಷಗಳ ಅವಧಿಗೆ ಎಲ್ಲಾ ಜಿಲ್ಲೆಗಳಲ್ಲಿ ನೇಮಿಸಲಾಗಿದೆ. ಖುರ್ದಾ ಜಿಲ್ಲೆಯ ಹೊಸ ಹೆಚ್ ಡಬ್ಲ್ಯೂ ಡಬ್ಲ್ಯೂ ಆಗಿ ಸುಭೇಂದು ಮಲ್ಲಿಕ್ ಅವರನ್ನು ನೇಮಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ನಾಗರಹಾವುಗಳು ಜನವಸತಿ ಪ್ರದೇಶಗಳಲ್ಲಿ ಪತ್ತೆಯಾಗುತ್ತಿರುವುದು ಹೆಚ್ಚಾಗಿದೆ. ಮಾನ್ಸೂನ್ನಿಂದಾಗಿ ದೇಶಾದ್ಯಂತ ವಸತಿ ಪ್ರದೇಶಗಳಲ್ಲಿ ದೈತ್ಯ ಸರೀಸೃಪಗಳು ಕಂಡುಬರುವ ಹಲವಾರು ಘಟನೆಗಳು ದಾಖಲಾಗಿವೆ.