ಬೆಂಗಳೂರು: ಯುವತಿಗೆ ಬ್ಯಾಂಕ್ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಹಣ ಪಡೆದು, ನಂತರ ಅತ್ಯಾಚಾರವೆಸಗಿದ ಆರೋಪದಡಿ ಸ್ಯಾಂಡಲ್ ವುಡ್ ನಟ ಶೇಷಗಿರಿಯನ್ನು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆ ಪೊಲಿಸರು ಬಂಧಿಸಿದ್ದಾರೆ.
ದೇಶಪ್ರೇಮ ಓಕೆ….. ಬ್ರಿಟಿಷರ ಮೇಲೆ ದ್ವೇಷ ಯಾಕೆ..? ಆಸ್ಕರ್ ನಾಮಿನೇಷನ್ ವಂಚಿತ ಸಿನಿಮಾ ‘ಸರ್ದಾರ್ ಉಧಮ್’ಗೆ ತೀರ್ಪುಗಾರರ ಸಬೂಬು
ನಟ ಶೇಷ್ ಅಲಿಯಾಸ್ ಶೇಷಗಿರಿ ಬಸವರಾಜ್ ವಿರುದ್ಧ ವಂಚನೆ, ಅತ್ಯಾಚಾರ, ಹಲ್ಲೆ ಆರೋಪ ಕೇಳಿಬಂದಿತ್ತು. ಹಲವು ದಿನಗಳಿಂದ ಆರೋಪಿ ಶೇಷಗಿರಿ ತಲೆಮರೆಸಿಕೊಂಡಿದ್ದು, ಇದೀಗ ಮೈಸೂರಿನಲ್ಲಿ ಬಂಧಿಸಲಾಗಿದೆ.
ಯುವತಿಗೆ ಬ್ಯಾಂಕ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ಆಕೆಯಿಂದ ಹಣವನ್ನೂ ಪಡೆದು, ಅಸಭ್ಯವಾಗಿ ವರ್ತಿಸಿದ್ದ. ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ನಟ ಶೇಷಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಶೇಷಗಿರಿ ಡಾರ್ಕ್, ಸಸ್ಪೆನ್ಸ್, ಕಿಲಾಡಿಗಳು, ಆಷಿಕಿ-3 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.