ನಿರಂತರ ಚಂಡಮಾರುತಗಳ ಹಾವಳಿಯಿಂದ ಗೋಡಂಬಿ ಫಸಲನ್ನು ಕಾಪಾಡಿಕೊಳ್ಳಲು ಕೇರಳದ ಕಣ್ಣೂರು ಜಿಲ್ಲೆಯ ಮಹಿಳೆಯೊಬ್ಬರು ಆವಿಷ್ಕಾರೀ ಐಡಿಯಾವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ.
ಮಕ್ಕಳಿಗೆ ಚೀನಾ ಆಟಿಕೆ ಕೊಡಿಸುವ ಪೋಷಕರಿಗೆ ಮುಖ್ಯ ಮಾಹಿತಿ: ಕ್ಯಾನ್ಸರ್, ಅನ್ನನಾಳ, ಶ್ವಾಸಕೋಶ ರೋಗ ಸಾಧ್ಯತೆ
ಗೋಡಂಬಿ ಮರಗಳಿಗೆ ಬೆಂಬಲ ನೀಡುವ ಬಹು ವಿಧದ ಬೇರುಗಳ ಅಭಿವೃದ್ಧಿ ಮೂಲಕ, ಮರದಲ್ಲಿ ಬಹುಬೇರುಗಳನ್ನು ಸೃಷ್ಟಿಸಿ, ಪ್ರತಿ ಘಟಕ ಪ್ರದೇಶದ ಉತ್ಪಾದನೆಯಲ್ಲಿ ಹೆಚ್ಚಳ ಮಾಡುವ ಈ ವಿಧಾನವನ್ನು ಅನ್ನಿಯಮ್ಮ ಬೇಬಿ ಹೆಸರಿನ ಈ ರೈತ ಮಹಿಳೆ ಅಭಿವೃದ್ಧಿ ಮಾಡಿದ್ದಾರೆ.
ಇದರಿಂದ ಕಾಂಡ ಹಾಗೂ ಬೇರುಗಳ ನಿರ್ವಹಣೆಯನ್ನು ಸ್ವಭಾವಿಕವಾಗಿ ಮಾಡುವುದಲ್ಲದೇ, ಉತ್ಪಾದನೆಯಲ್ಲಿ ನಕಾರಾತ್ಮಕ ಬದಲಾವಣೆ ತಪ್ಪಿಸಿ, ಜೊತೆಗೆ ಚಂಡಮಾರುತಗಳ ಏಟಿನಿಂದ ಮರಗಳಿಗೆ ಹೆಚ್ಚುವರಿ ರಕ್ಷಣೆ ನೀಡಿದಂತಾಗುತ್ತದೆ ಎಂದು ಬೇಬಿ ಹೇಳುತ್ತಾರೆ.
ಭಾಷೆ ಬಾರದ ವ್ಯಕ್ತಿ ಕರೆ ಕಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ತುರ್ತು ನಿರ್ವಹಣೆ ಸಹಾಯಕಿ
ಈ ಆವಿಷ್ಕಾರೀ ತಂತ್ರಜ್ಞಾನವನ್ನು ರಾಷ್ಟ್ರೀಯ ಆವಿಷ್ಕಾರ ಪ್ರತಿಷ್ಠಾನ ಪರಿಗಣಿಸಿದ್ದು, ಇದೇ ಐಡಿಯಾವನ್ನು ಇನ್ನಷ್ಟು ಪಕ್ವಗೊಳಿಸಲು ನೋಡುತ್ತಿದೆ.
ಭಾರತದಲ್ಲಿ ಒಟ್ಟಾರೆ 10.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಡಂಬಿ ಬೆಳೆಯುತ್ತಿದ್ದು, ಜಗತ್ತಿನಲ್ಲಿ ಗೇರು ಬೀಜದ ಅತಿ ದೊಡ್ಡ ಉತ್ಪಾದಕರು ನಾವೇ ಆಗಿದ್ದೇವೆ. ವಾರ್ಷಿಕ 7.53 ಟನ್ನಷ್ಟು ಗೋಡಂಬಿ ಉತ್ಪಾದನೆಯಾಗುವ ಭಾರತದಲ್ಲಿ, ಅದರಲ್ಲೂ ಕೇರಳದಂಥ ಕರಾವಳಿ ರಾಜ್ಯಗಳಲ್ಲಿ ಲಕ್ಷಾಂತರ ರೈತರು ಈ ಬೆಳೆಯನ್ನು ಅವಲಂಬಿಸಿದ್ದಾರೆ.