ದೀಪಾವಳಿ ಹತ್ತಿರ ಬರ್ತಿದೆ. ಧನ್ ತೇರಸ್ ದಿನ ಬಂಗಾರ, ಪಾತ್ರೆ, ಬಟ್ಟೆ, ಸಂಪತ್ತು ಮತ್ತು ಆಸ್ತಿ ಖರೀದಿಗೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಧನ್ ತೇರಸ್ ದಿನ ವಸ್ತುಗಳನ್ನು ಖರೀದಿಸುವುದರ ಜೊತೆಗೆ, ದಾನ ಮಾಡುವ ಸಂಪ್ರದಾಯವೂ ಇದೆ.
ಧನ್ ತೇರಸ್ ದಿನ ದಾನ ಮಾಡಿದ್ರೆ ಲಕ್ಷ್ಮಿ ಒಲಿಯುತ್ತಾಳೆಂಬ ನಂಬಿಕೆಯಿದೆ. ಈ ವರ್ಷ ನವೆಂಬರ್ 2, 2021 ರಂದು, ಧನ್ ತೇರಸ್ ದಿನವನ್ನು ಆಚರಿಸಲಾಗ್ತಿದೆ. ಈ ದಿನ ಕೆಲ ವಸ್ತುಗಳನ್ನು ಅಗತ್ಯವಾಗಿ ದಾನ ಮಾಡಬೇಕು.
ಧಾನ್ಯ: ಧನ್ ತೇರಸ್ ದಿನದಂದು ಆಹಾರ ಧಾನ್ಯಗಳನ್ನು ದಾನ ಮಾಡಬೇಕು. ಆಹಾರ ಧಾನ್ಯಗಳನ್ನು ದಾನ ಮಾಡಲು ಸಾಧ್ಯವಾಗದೆ ಹೋದ್ರೆ ಬಡವರಿಗೆ ಆಹಾರವನ್ನು ನೀಡಬೇಕು. ಊಟದ ಜೊತೆ ಸಿಹಿ ನೀಡಬೇಕು.
ಕಬ್ಬಿಣ: ಧನ್ ತೇರಸ್ ದಿನದಂದು ಕಬ್ಬಿಣವನ್ನು ದಾನ ಮಾಡಬೇಕು. ಇದು ಅದೃಷ್ಟ ಬದಲಿಸುತ್ತದೆ. ಸ್ಥಗಿತಗೊಂಡ ಕೆಲಸ ಮತ್ತೆ ಶುರುವಾಗುತ್ತದೆ.
ಬಟ್ಟೆ: ಧನ್ ತೇರಸ್ ದಿನದಂದು ಬಡವರಿಗೆ ಬಟ್ಟೆ ದಾನ ಮಾಡಬೇಕು. ಕುಬೇರನ ಕೃಪೆ ಸಿಗುತ್ತದೆ. ಅಪಾರ ಸಂಪತ್ತು ಪ್ರಾಪ್ತಿಯಾಗುತ್ತದೆ. ಹಳದಿ ಬಟ್ಟೆಗಳನ್ನು ದಾನ ಮಾಡುವುದು ಬಹಳ ಮುಖ್ಯ.
ಪೊರಕೆ: ಧನ್ ತೇರಸ್ ದಿನ ಹೊಸ ಪೊರಕೆಯನ್ನು ಖರೀದಿಸುವ ಸಂಪ್ರದಾಯವಿದೆ. ಅದೇ ದಿನ ಪೊರಕೆ ದಾನ ಮಾಡಬೇಕು. ದೇವಸ್ಥಾನಗಳಿಗೆ ಪೊರಕೆ ದಾನ ಮಾಡುವುದು ಶುಭಕರ.