ಮೈಸೂರು: ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ, ಜಾತಿ ಜಾತಿಗಳ ನಡುವೆ ಒಡಕು ಆರಂಭಿಸಿದ್ದೇ ಅವರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ತೂಕ ಕಡಿಮೆ ಮಾಡುತ್ತೆ ಈ ಧಾನ್ಯ
ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಂದಗಿ ಹಾಗೂ ಹಾನಗಲ್ ನಲ್ಲಿ ಸಿದ್ದರಾಮಯ್ಯ ಜಾತಿವಾರು ಸಭೆಗಳನ್ನು ಮಾಡುತ್ತಿದ್ದಾರೆ. ಒಂದು ವೇಳೆ ಇವರು ಜಾತ್ಯಾತೀತರಾಗಿದ್ದರೆ ಜಾತಿವಾರು ಸಭೆಗಳನ್ನು ಯಾಕೆ ಮಾಡುತ್ತಿದ್ದರು? ಇವರೆಂಥಾ ಜಾತ್ಯಾತೀತ ವಾದಿಗಳು ಎಂದು ಪ್ರಶ್ನಿಸಿದರು.
ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಐಸಿಐಸಿಐ ಬ್ಯಾಂಕ್ ಷೇರು
ಸಿಂದಗಿಯಲ್ಲಿ ಬಿಜೆಪಿ ಗೆಲ್ಲಿಸಲು ಕಾಂಗ್ರೆಸ್ ನಾಯಕರು ಕೆಲಸ ಮಾಡುತ್ತಿದ್ದಾರೆ. ಸಿಂದಗಿಯಲ್ಲಿ ಸ್ಪರ್ಧೆ ಇರುವುದೇ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ. ಆದರೂ ಕಾಂಗ್ರೆಸ್ ನವರು ಯಾಕೆ ಅಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಉದ್ದೇಶವೇ ಜೆಡಿಎಸ್ ನ್ನು ಸೋಲಿಸಿ ಬಿಜೆಪಿ ಗೆಲ್ಲಿಸಬೇಕು ಎಂಬುದು ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ತಾನು ರೈತ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನಿಜವಾದ ರೈತ ನಾನು. ಅವರು ಎಂದು ಹೊಲ ಉಳಿಮೆ ಮಾಡಿದ್ದಾರೆ? ಅವರದ್ದು ಫಾರ್ಮ್ ಹೌಸ್ ಸದ್ಯ ಇಲ್ಲ, ಅಲ್ಲಿ ಏನು ಬಿತ್ತಿದ್ದಾರೆ? ನಿಜವಾದ ರೈತ ನಾನು. ಕುರಿ ಮಂದೆಗಳ ಮಧ್ಯೆ ಕೂಡ ಊಟ ಮಾಡಿದ್ದೇನೆ ಎಂದು ಹೇಳಿದರು.