alex Certify ಪೋರ್ನ್‌ ಹಬ್‌ ಮೂಲಕ ಗಣಿತದ ಪಾಠ ಹೇಳಿಕೊಟ್ಟ ಶಿಕ್ಷಕ..! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋರ್ನ್‌ ಹಬ್‌ ಮೂಲಕ ಗಣಿತದ ಪಾಠ ಹೇಳಿಕೊಟ್ಟ ಶಿಕ್ಷಕ..! ಇದರ ಹಿಂದಿದೆ ಈ ಕಾರಣ

ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಆನ್ಲೈನ್ ಮೂಲಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ.

ಜ಼ೂಮ್ ಸೇರಿದಂತೆ ಆನ್ಲೈನ್‌ನ ಅನೇಕ ಪ್ಲಾಟ್‌ಫಾರಂಗಳ ಮೂಲಕ ಕೋಟ್ಯಂತರ ವಿದ್ಯಾರ್ಥಿಗಳು ಪಾಠ ಪ್ರವಚನ ಕೇಳುತ್ತಿದ್ದು, ಲೈವ್ ಲೆಕ್ಚರಿಂಗ್ ಮೂಲಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ತೈವಾನ್‌ನ ಚಾಂಗ್ಶು ಹೆಸರಿನ ಗಣಿತ ಶಿಕ್ಷಕರೊಬ್ಬರು ಲೆಕ್ಕಾಚಾರದ ಅಭ್ಯಾಸವನ್ನು ತಮ್ಮ ವಿದ್ಯಾರ್ಥಿಗಳಿಗೆ ಹೇಳಿಕೊಡಲು ಭಾರೀ ಪ್ರಾಕ್ಟಿಕಲ್ ಕ್ಲಾಸ್‌ಅನ್ನೇ ತೆಗೆದುಕೊಂಡಿದ್ದಾರೆ. ಗಣಿತದೊಂದಿಗೆ ಯಾವ ಕೋನದಲ್ಲೂ ಸಂಬಂಧವಿಲ್ಲದ ಜಾಲತಾಣವೊಂದರಲ್ಲಿ ಈ ಶಿಕ್ಷಕ ಲೆಕ್ಕದ ಅಭ್ಯಾಸಗಳನ್ನು ಪೋಸ್ಟ್ ಮಾಡಿದ್ದಾರೆ.

ನಿಮಗೆ ಗೊತ್ತಾ ಕಪ್ಪು ಬೆಳ್ಳುಳ್ಳಿ…..?

ಪೋರ್ನ್‌‌ಹಬ್ ಜಾಲತಾಣದಲ್ಲಿ 200ಕ್ಕೂ ಹೆಚ್ಚಿನ ಗಣಿತ ಪಾಠಗಳನ್ನು ಪೋಸ್ಟ್ ಮಾಡಿರುವ ಈ ಶಿಕ್ಷಕ, ಈ ಎಲ್ಲಾ ವಿಡಿಯೋಗಳಲ್ಲೂ ಕೇವಲ ಗಣಿತದ ಲೆಕ್ಕಗಳನ್ನಷ್ಟೇ ಕವರ್‌ ಮಾಡಿದ್ದು, ಯಾವುದೇ ರೀತಿಯಲ್ಲೂ ಅಸಭ್ಯ ಕಂಟೆಂಟ್‌ ಅನ್ನು ಹಾಕಿಲ್ಲ. ಗಣಿತದಲ್ಲಿ ಸ್ನಾತಕೋತ್ತರ ಡಿಗ್ರಿ ಹೊಂದಿರುವ ಈ ಶಿಕ್ಷಕ ಕಳೆದ 15 ವರ್ಷಗಳಿಂದ ತೈವಾನೀಸ್ ಮಕ್ಕಳಿಗೆ ಗಣಿತದ ಪಾಠ ಹೇಳಿಕೊಡುತ್ತಿದ್ದಾರೆ.

ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್: 18 ಸಾವಿರ ರೇಷನ್ ಕಾರ್ಡ್ ರದ್ದು

ವಯಸ್ಕರ ಜಾಲತಾಣದ ಜನಪ್ರಿಯತೆಯ ಕಾರಣದಿಂದಾಗಿ ಅಲ್ಲಿ ತಮ್ಮ ಗಣಿತದ ಪಾಠವಿರುವ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾಗಿ ವೃತ್ತಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ 34 ವರ್ಷದ ಶಿಕ್ಷಕ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...