alex Certify BIG NEWS: ಬೆಂಗಳೂರಲ್ಲಿ ಐಸಿಸ್ ಉಗ್ರ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಲ್ಲಿ ಐಸಿಸ್ ಉಗ್ರ ಅರೆಸ್ಟ್

ಬೆಂಗಳೂರು: ಐಸಿಸ್ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಶಂಕಿತ ಉಗ್ರನನ್ನು ಎನ್.ಐ.ಎ. ಅಧಿಕಾರಿಗಳು ಬಂಧಿಸಿದ್ದಾರೆ.

ಫ್ರೇಜರ್ ಟೌನ್ ನಿವಾಸಿ ಮೊಹಮ್ಮದ್ ತೌಕಿರ್(33) ಬಂಧಿತ ಆರೋಪಿ ಎಂದು ಹೇಳಲಾಗಿದೆ. ನಿಷೇಧಿತ ಐಸಿಸ್ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಈತ ನಂಟು ಹೊಂದಿದ್ದ. ಉಗ್ರ ಕೃತ್ಯಕ್ಕೆ ಫಂಡಿಂಗ್ ಮಾಡುತ್ತಿದ್ದ ತೌಕಿರ್ ಸ್ಥಳೀಯ ಯುವಕರಿಗೆ ಪ್ರಚೋದನೆ ನೀಡುತ್ತಿದ್ದ ಆರೋಪ ಕೇಳಿಬಂದಿದೆ.

ಈ ಹಿಂದೆ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸಿರ್ ಎಂಬುವರನ್ನು ಎನ್.ಐ.ಎ. ಬಂಧಿಸಿದ್ದು, ಕಳೆದ ಏಪ್ರಿಲ್ ನಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣದ ತನಿಖೆ ವೇಳೆ ತೌಕಿರ್ ಸುಳಿವು ಸಿಕ್ಕಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಿ ಆತನನ್ನು ಬಂಧಿಸಲಾಗಿದೆ. ಈತ ಸ್ಥಳೀಯ ಯುವಕರನ್ನು ಐಸಿಸ್ ಸೇರಲು ಪ್ರೇರೇಪಿಸುತ್ತಿದ್ದ ಸಿರಿಯಾಗೆ ಭೇಟಿ ನೀಡಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...