ಪ್ರಭಾಸ್ ಅಭಿನಯದ ರಾಧಾಕೃಷ್ಣ ಕುಮಾರ್ ನಟನೆಯ ಬಹುನಿರೀಕ್ಷಿತ ‘ರಾಧೆಶ್ಯಾಮ್’ ಚಿತ್ರದ ಟೀಸರ್ ಅನ್ನು ನಿನ್ನೆ ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಯುವಿ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು ಈ ಟೀಸರ್ ಇದೀಗ 50 ಮಿಲಿಯನ್ ವೀಕ್ಷಣೆ ಪಡೆದು ಭರ್ಜರಿಯಾಗಿ ಮುನ್ನುಗ್ಗುತ್ತಲೇ ಇದೆ.
1 ನಿಮಿಷ 19 ಸೆಕೆಂಡ್ ಗಳ ಈ ಟೀಸರ್ ಗೆ ನೋಡುಗರಿಂದ ಸಾಕಷ್ಟು ಮೆಚ್ಚುಗೆ ದೊರೆತಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಜನವರಿ 14ರಂದು ಸುಮಾರು 6 ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಪೋಪ್ ಫ್ರಾನ್ಸಿಸ್ ರ ಟೋಪಿ ಎತ್ತಿಕೊಳ್ಳಲು ಯತ್ನಿಸಿದ ಬಾಲಕ…! ವಿಡಿಯೋ ವೈರಲ್
ಯುವಿ ಕ್ರಿಯೇಷನ್ಸ್ ಹಾಗೂ ಟಿ ಸಿರೀಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಪ್ರಭಾಸ್ ಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ. ವಿಕ್ರಮಾದಿತ್ಯನ ಪಾತ್ರದಲ್ಲಿ ಪ್ರಭಾಸ್ ಅಭಿನಯಿಸಿದ್ದು ಪ್ರೇರಣಾ ಎಂಬ ಹುಡುಗಿಯ ಪಾತ್ರದಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸುಮಾರು 350 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.