ಮೂರು ಕಿಲೋನಷ್ಟು ಸಿಂಥೆಟಿಕ್ ಡ್ರಗ್ಸ್ ಹಾಗೂ ಮಾರಿಯಾನಾದ ಕಳ್ಳಸಾಗಾಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದಾರೆ.
ಮೊದಲ ಘಟನೆಯಲ್ಲಿ, ಎನ್‌ಸಿಬಿಯ ಹೈದರಾಬಾದ್ ಉಪವಿಭಾಗದ ಸಿಬ್ಬಂದಿ ಪಾರ್ಸಲ್ ಒಂದನ್ನು ಪರೀಕ್ಷಿಸಿ ಹಾಗೂ ಮೂರು ಕೆಜಿಯಷ್ಟು ಸೂಡೋಫೆಡ್ರಿನ್ ಅನ್ನು ಮೂರು ಲೆಹಂಗಾಗಳಲ್ಲಿ ಬಚ್ಚಿಡಲಾಗಿದ್ದನ್ನು ಪತ್ತೆ ಮಾಡಿದ್ದಾರೆ. ಈ ಪಾರ್ಸೆಲ್ ಅನ್ನು ಆಸ್ಟ್ರೇಲಿಯಾಗೆ ಕಳುಹಿಸಲು ಉದ್ದೇಶಿಸಲಾಗಿತ್ತು.
ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಭಾರತೀಯರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ
ಮತ್ತೊಂದು ಪ್ರಕರಣದಲ್ಲಿ, ಮೆಥಾಮ್ತಮಿನ್ ಮತ್ತು ಮೆಥಾಕೊಲೋನ್ ಮಾದಕ ದ್ರವ್ಯಗಳೊಂದಿಗೆ ಹೈದರಾಬಾದ್‌ನತ್ತ ತೆರಳುತ್ತಿದ್ದ ನಾಲ್ವರನ್ನು ಮಾಲ್ ಸಮೇತ ಬೆಂಗಳೂರಿನ ದೇವನಹಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಳ್ಳಸಾಗಾಟಗಾರರು ಬೆಂಗಳೂರಿನಿಂದ ಮಾಲನ್ನು ಪಡೆದು, ಅವುಗಳನ್ನು ಹೈದರಾಬಾದ್‌ನಲ್ಲಿರುವ ಪಬ್‌ಗಳಿಗೆ ಪೂರೈಸುತ್ತಿದ್ದರು ಎಂದು ಎನ್‌ಸಿಬಿಯ ಬೆಂಗಳೂರು ವಲಯದ ನಿರ್ದೇಶಕ ಅಮಿತ್ ಘವಾಟೆ ತಿಳಿಸಿದ್ದಾರೆ.
ಇತ್ತೀಚೆಗೆ ಮಾದಕವಸ್ತು ಸಾಗಾಟ ಮತ್ತು ವಿತರಣಾಜಾಲ ಬೇಧಿಸುವ ಪ್ರಕರಣ ಹೆಚ್ಚಾಗಿದ್ದು, ಅಚ್ಚರಿ ರೀತಿಯ ಅಡ್ಡದಾರಿಗಳು ಬಯಲಾಗುತ್ತಿವೆ.