ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಯಾಣಿಕರಿಗೆ ತನ್ನ ದೇಶಕ್ಕೆ ಸ್ವಾಗತಿಸಲು ಸಿಂಗಾಪುರ ಸಜ್ಜಾಗಿದೆ. ಅನ್ಯದೇಶದವರ ಪ್ರವೇಶಕ್ಕೆ ಅಲ್ಲಿನ ಸರ್ಕಾರ ಅಕ್ಟೋಬರ್ 26ರಿಂದ ಅನುಮತಿ ನೀಡಲಿದೆ.
“ಸಿಂಗಾಪುರಕ್ಕೆ ಹೊರಡುವ ಮುನ್ನ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾಗೆ 14 ದಿನಗಳ ಪ್ರಯಾಣದ ಇತಿಹಾಸ ಹೊಂದಿರುವ ಎಲ್ಲಾ ಪ್ರಯಾಣಿಕರಿಗೂ ಅಕ್ಟೋಬರ್ 26 ರ 11:59ರಿಂದ ದೇಶದ ಮೂಲಕ ಪ್ರಯಾಣಿಸಲು ಅನುಮತಿ ನೀಡಲಾಗುವುದು” ಎಂದು ಸಿಂಗಾಪುರದ ಸ್ಟೇಟ್ ಟೈಮ್ಸ್ ವರದಿ ಮಾಡಿದೆ.
ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ, ಈರುಳ್ಳಿ ಸೇರಿ ಅಗತ್ಯ ವಸ್ತು ದರ ಇಳಿಕೆ
ಕೋವಿಡ್-19 ಪ್ರಕರಣಗಳಲ್ಲಿ ದೊಡ್ಡ ಜಿಗಿತ ಕಾಣುತ್ತಿರುವ ನಡುವೆಯೇ, ಕಳೆದ ವಾರದಿಂದ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಮುಕ್ತವಾದ ಸಿಂಗಾಪುರ ಕ್ವಾರಂಟೈನ್ ಮುಕ್ತವಾಗಿ ತನ್ನ ದೇಶಕ್ಕೆ ಬರಲು ಪ್ರಯಾಣಿಕರಿಗೆ ಅನುಮತಿ ನೀಡಿದೆ.
15 ದೇಶಗಳಿಂದ ಬರುವ, ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರು ಆಗಮಿಸಲು ಸಿಂಗಾಪುರದಲ್ಲಿ ಅನುಮತಿ ನೀಡಲಾಗಿದೆ. ಜೊತೆಗೆ ಸ್ಥಳೀಯ ಮನೆಗಳ ಅಗತ್ಯತೆಗಳನ್ನು ಪೂರೈಸುವ ಮಂದಿ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಲ್ಲಿ ಅವರಿಗೆ ಬರಲು ಸಹ ಅನುಮತಿ ನೀಡಲಾಗಿದೆ.