ಟಿ-20 ವಿಶ್ವಕಪ್ ನಲ್ಲಿ ನಾಳೆ ಭಾರತ-ಪಾಕ್ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದನ್ನು ಫೈನಲ್ ಪಂದ್ಯದಂತೆ ನೋಡಲಾಗ್ತಿದೆ. ಭಾರತ, ಪಾಕಿಸ್ತಾನ ಮಾತ್ರವಲ್ಲ ಇಡೀ ವಿಶ್ವವೇ ಪಂದ್ಯ ವೀಕ್ಷಣೆಗೆ ಕಾದು ಕುಳಿತಿದೆ.
ಭಾನುವಾರ ನಡೆಯಲಿರುವ ಭಾರತ ವಿರುದ್ಧ ಪಂದ್ಯಕ್ಕೆ ಪಾಕಿಸ್ತಾನ 12 ಸದಸ್ಯರ ತಂಡವನ್ನು ಈಗಾಗಲೇ ಪ್ರಕಟಿಸಿದೆ. ಅನುಭವಿ ಆಟಗಾರರಾದ ಶೋಯೆಬ್ ಮಲಿಕ್ ಮತ್ತು ಮೊಹಮ್ಮದ್ ಹಫೀಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪಂದ್ಯ ದುಬೈನಲ್ಲಿ ನಡೆಯಲಿದೆ.
ಪಂದ್ಯಕ್ಕೆ 24 ಗಂಟೆ ಮೊದಲೇ ಪಾಕಿಸ್ತಾನ 12 ಆಟಗಾರರ ಘೋಷಣೆ ಮಾಡಿದೆ. ಅದ್ರಲ್ಲಿ ಪ್ಲೇಯಿಂಗ್ 11 ಆಯ್ಕೆ ಕೊನೆಯಲ್ಲಿ ನಡೆಯಲಿದೆ. ಐಸಿಸಿ ರ್ಯಾಂಕಿಂಗ್‌ನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಟೀಮ್ ಇಂಡಿಯಾ ಪ್ರತಿ ಬಾರಿಯೂ ಗೆದ್ದಿದೆ.
2016ರ ಟಿ20 ವಿಶ್ವಕಪ್‌ನಲ್ಲಿ ಭಾರತ ಕೊನೆಯ ಬಾರಿ ಪಾಕಿಸ್ತಾನವನ್ನು ಸೋಲಿಸಿತ್ತು.
ಪಾಕಿಸ್ತಾನದ 12 ಆಟಗಾರರ ತಂಡ: ಬಾಬರ್ ಅಜಮ್ (ನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಮೊಹಮ್ಮದ್ ರಿಜ್ವಾನ್, ಇಮಾದ್ ವಾಸಿಮ್, ಮೊಹಮ್ಮದ್ ಹಫೀಜ್, ಶಾದಾಬ್ ಖಾನ್, ಶೋಯೆಬ್ ಮಲಿಕ್, ಹ್ಯಾರಿಸ್ ರೌಫ್, ಹಸನ್ ಅಲಿ ಮತ್ತು ಶಾಹೀನ್ ಅಫ್ರಿದಿ.