ಉಪಚುನಾವಣೆ ಸಮರ ಗೆಲ್ಲಲು ಟೊಂಕ ಕಟ್ಟಿ ನಿಂತಿರುವ ಸಿಎಂ ಬಸವರಾಜ ಬೊಮ್ಮಾಯಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇಂದು ಹಾವೇರಿಯ ಚಿಕೌಂಶಿ ಹೊಸೂರು ಗ್ರಾಮದಲ್ಲಿ ಅಬ್ಬರದ ಪ್ರಚಾರ ಕಾರ್ಯ ನಡೆಸಿದ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಯನ್ನೇಗೈದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇನೆ ಎಂದು ಹೇಳಿಕೊಳ್ತಿದೆ. ಆದರೆ ನಿಜಾಂಶ ಏನೆಂದರೆ ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ರಕ್ಷಣೆ ಆಗ್ತಿದೆ. ಐದು ವರ್ಷಗಳ ಕಾಲ ಅಲ್ಪಸಂಖ್ಯಾತರನ್ನು ಬಾವಿಯಲ್ಲಿ ಇಡುತ್ತಾರೆ. ಚುನಾವಣೆ ಟೈಂನಲ್ಲಿ ಅಲ್ಪಸಂಖ್ಯಾತರಿಗೆ ಹಗ್ಗ ಕೊಟ್ಟು ಮೇಲೆತ್ತುತ್ತಾರೆ. ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಂದ ಮತ ಹಾಕಿಸಿಕೊಂಡ ಬಳಿಕ ಮತ್ತೆ ಅವರನ್ನು ಬಾವಿಗೆ ತಳ್ಳುತ್ತಾರೆ.
ಅಲ್ಪಸಂಖ್ಯಾತರ ವಿಚಾರದಲ್ಲಿ ಕಾಂಗ್ರೆಸ್ ಗುತ್ತಿಗೆ ರಾಜಕಾರಣ ಮಾಡುತ್ತಿದೆ. ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿಕೊಂಡು ತಿರುಗುತ್ತೆ, ಆದರೆ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದೇ ಈ ಕಾಂಗ್ರೆಸ್. ನೀವು ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತಿಲ್ಲ. ಅಲ್ಪಸಂಖ್ಯಾತರೇ ಕಾಂಗ್ರೆಸ್ ರಕ್ಷಣೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಕಾಂಗ್ರೆಸ್ನ್ನು ಬಿಟ್ಟುಕೊಟ್ಟ ದಿನ ನಿಮ್ಮ ಪಕ್ಷ ಅಡ್ರೆಸ್ಗೇ ಇರಲ್ಲ.
ಕಾಂಗ್ರೆಸ್ನ್ನು ಮುಳುಗುವ ಹಡಗು ಎಂದು ಕರೆಯುತ್ತಾರೆ. ಆದರೆ ಕಾಂಗ್ರೆಸ್ ಈಗಾಗಲೇ ಮುಳುಗಿ ಹೋಗಿದೆ. ಬೇಕಿದ್ದರೆ ಭೂಪಟ ನೋಡಿ, ಕರ್ನಾಟಕದಲ್ಲಿ ಒಂಚೂರು ಕಾಂಗ್ರೆಸ್ ಅಲುಗಾಡ್ತಿದೆ. 30ನೇ ತಾರೀಖು ನೀವು ಬಿಜೆಪಿಗೆ ಮತ ಹಾಕಿ. ಅಲುಗಾಡುತ್ತಿರುವ ಕಾಂಗ್ರೆಸ್ ಮುಳಗೇ ಹೋಗುತ್ತೆ ಎಂದು ಹೇಳಿದ್ರು.