alex Certify ಚಿಕನ್ ಪಕೋಡಾ ತಿಂದು 1 ಲಕ್ಷ ಸಂಬಳ ಪಡೆಯಿರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕನ್ ಪಕೋಡಾ ತಿಂದು 1 ಲಕ್ಷ ಸಂಬಳ ಪಡೆಯಿರಿ….!

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸದ ಹುಡುಕಾಟದಲ್ಲಿರುವವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ನೀವು ಹೆಚ್ಚಿನ ಯಾವುದೇ ಕೆಲಸ ಮಾಡಬೇಕಾಗಿಲ್ಲ. ಚಿಕನ್ ಪಕೋಡಾದ ರುಚಿ ಫರ್ಫೆಕ್ಟ್ ಆಗಿದ್ರೆ ಸಾಕು. ನೀವು ಆರಾಮವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಜೊತೆಗೆ 1 ಲಕ್ಷ ರೂಪಾಯಿ ಸಂಬಳ ಎಣಿಸಬಹುದು.

ಯುಕೆ  ಕಂಪನಿಯೊಂದು, ಚಿಕನ್ ಡಿಪ್ಪರ್ ಗಳನ್ನು ತಯಾರಿಸುತ್ತಿದೆ. ಇದೊಂದು ಫ್ರೈಡ್ ಚಿಕನ್. ಕಂಪನಿಯು ಈ ಉತ್ಪನ್ನವನ್ನು ಮಾರುಕಟ್ಟೆಗೆ ತರಲು ಬಯಸುತ್ತದೆ. ಅದಕ್ಕಾಗಿಯೇ ಅದರ ಪರೀಕ್ಷಕರನ್ನು ಇಟ್ಟುಕೊಳ್ಳಲು ಬಯಸಿದೆ. ಪ್ರಸಿದ್ಧ ಫಿಶ್ ಪಿಂಗರ್ ಕಂಪನಿ ಬರ್ಡ್ಸ್ ಐ ನಲ್ಲಿ ಪರೀಕ್ಷಕರ ಹುದ್ದೆ ಖಾಲಿ ಇದೆ. ಚಿಕನ್ ಡೀಪರ್ ರುಚಿಯನ್ನು ಸರಿಯಾಗಿ ಗುರುತಿಸುವ ವ್ಯಕ್ತಿಯ ಅವಶ್ಯಕತೆಯಿದೆ. ಕಂಪನಿಯು ಚಿಕನ್ ಡೀಪ್ಸ್ ಅತ್ಯುತ್ತಮವಾಗಿರಬೇಕೆಂದು  ಬಯಸುತ್ತದೆ.

‘ಹಣ ಹಂಚುವಷ್ಟು ಕೆಳಮಟ್ಟಕ್ಕೆ ಇಳಿದವರು ನಾವಲ್ಲ’ ; ಕಾಂಗ್ರೆಸ್​ ಆರೋಪಕ್ಕೆ ಸವದಿ ತಿರುಗೇಟು

ಡಿಪ್ಪರ್‌ಗಳ ಗರಿ, ಮಾಧುರ್ಯ ಮತ್ತು ಸಾಸ್ ರುಚಿಯನ್ನು ಸರಿಯಾಗಿ ಹೇಳುವಂತ ವ್ಯಕ್ತಿಯ ಅವಶ್ಯಕತೆಯಿದೆ. ಯುಕೆಯಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ, ಕೆಲವರು ಚಿಕನ್ ಡಿಪ್ಪರ್‌ಗಳೊಂದಿಗೆ ಟೊಮೆಟೊ ಸಾಸ್ ಉತ್ತಮ ಎಂದಿದ್ದಾರೆ. ಮತ್ತೆ ಕೆಲವರು  ಮೇಯನೇಸ್ ಎಂದಿದ್ದಾರೆ. ಇದ್ರಲ್ಲಿ ಯಾವುದು ಬೆಸ್ಟ್ ಎಂಬುದನ್ನೂ ಉದ್ಯೋಗಿ ಆಯ್ಕೆ ಮಾಡಬೇಕು.

ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸುವದಲ್ಲದೆ 250 ಪದಗಳ ಪತ್ರವನ್ನು birdseyeHR@chiefdippingofficer.co.uk ಗೆ ಕಳುಹಿಸಬಹುದು. ನಿಮ್ಮನ್ನು ಏಕೆ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಇದ್ರಲ್ಲಿ ಬರೆಯಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...