alex Certify ‘ಹಣ ಹಂಚುವಷ್ಟು ಕೆಳಮಟ್ಟಕ್ಕೆ ಇಳಿದವರು ನಾವಲ್ಲ’ ; ಕಾಂಗ್ರೆಸ್​ ಆರೋಪಕ್ಕೆ ಸವದಿ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಣ ಹಂಚುವಷ್ಟು ಕೆಳಮಟ್ಟಕ್ಕೆ ಇಳಿದವರು ನಾವಲ್ಲ’ ; ಕಾಂಗ್ರೆಸ್​ ಆರೋಪಕ್ಕೆ ಸವದಿ ತಿರುಗೇಟು

ಬೈ ಎಲೆಕ್ಷನ್​ ಭರಾಟೆ ಜೋರಾಗಿರುವ ಬೆನ್ನಲ್ಲೇ ರಾಜಕೀಯ ಕೆಸರೆರೆಚಾಟ ಕೂಡ ಹೆಚ್ಚಾಗಿದೆ. ಬಿಜೆಪಿ ನಾಯಕರು ಹಣ ಹಂಚಿ ಮತ ಬೇಟೆ ಮಾಡುತ್ತಿದ್ದಾರೆ ಎಂಬ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆರೋಪಕ್ಕೆ ವಿಜಯಪುರದ ಸಿಂದಗಿಯಲ್ಲಿ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ರು .

ಹಣ ಹಂಚಿಕೆ ಮಾಡಿ ಮತ ಪಡೆದು ನಮಗೆ ರೂಢಿ ಇಲ್ಲ. ನಮ್ಮ ಪಕ್ಷ ಅಷ್ಟೊಂದು ಕೆಳ ಮಟ್ಟಕ್ಕೆ ಇಳಿದೂ ಇಲ್ಲ. ಕಾಂಗ್ರೆಸ್​ ಪಕ್ಷದವರೇ ಮೂಟೆ ಮೂಟೆ ಹಣ ತಂದು ಹಂಚಿ ಚುನಾವಣೆ ಗೆಲ್ಲಲು ಪ್ಲಾನ್​ ಮಾಡಿರಬೇಕು. ಜನರ ನಾಡಿ ಮಿಡಿತ ಏನು ಅನ್ನುವುದು ಬಿಜೆಪಿಗೆ ಅರ್ಥವಾಗಿದೆ. ಈ ಕ್ಷೇತ್ರದಲ್ಲಿ ರಮೇಶ ಭೂಸನೂರ 25 ಸಾವಿರ ಮತಗಳ ಅಂತರದಲ್ಲಿ ಜಯಿಸಲಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲಲು ಮೋದಿ ಹಾಗೂ ಬೊಮ್ಮಾಯಿ ಆಡಳಿತವೇ ನಮಗೆ ವರದಾನವಾಗಲಿದೆ. ರಮೇಶ ಭೂಸನೂರು ಗೆಲುವು ಸೂರ್ಯ – ಚಂದ್ರರಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ರಪಡಿಸಿದ್ರು.

ಕಳೆದ ಬಾರಿ ಅನುಕಂಪದ ಮತ ಪಡೆದು ಮನಗೂಳಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಭೂಸನೂರ ಪರ ಜನರಿಗೆ ಒಲವಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಈ ಭಾಗದ ಜನತೆ ಶತಾಯಗತಾಯ ಯತ್ನಿಸುತ್ತಿದ್ದಾರೆ. ನಾಳೆ ಸಿಎಂ ಬೊಮ್ಮಾಯಿ ಕೂಡ ಇಲ್ಲಿನ 12 ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಮಧ್ಯಾಹ್ನದ ಬಳಿಕ ಪಟ್ಟಣದಲ್ಲಿ ಕ್ಯಾಂಪೇನ್​ ನಡೆಸುತ್ತಾರೆ. ಈಶ್ವರಪ್ಪ ಕೂಡ ಪ್ರಚಾರ ಕಾರ್ಯಕ್ಕೆ ಆಗಮಿಸುತ್ತಾರೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...