ಶಾರುಖ್ ಖಾನ್ ಸರಳತೆಯನ್ನು ಮೆಲುಕುಹಾಕಿದ ಗಾಯಕಿ 23-10-2021 7:48AM IST / No Comments / Posted In: Featured News, Live News, Entertainment ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ತಮ್ಮ ಸರಳತೆ ಹಾಗೂ ನಮ್ರತೆಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ವಿಷಯವನ್ನು ಗಾಯಕಿ ಚಿನ್ಮಯಿ ಶ್ರೀಪಾದ ಅವರು ನೆನಪಿಸಿಕೊಂಡಿದ್ದಾರೆ. ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ತಮ್ಮ ಪುತ್ರ ಆರ್ಯನ್ ಖಾನ್ ನನ್ನು ಶಾರುಖ್ ಭೇಟಿ ಮಾಡಿದ್ದು, ಐಷಾರಾಮಿ ಕ್ರೂಸ್ ಹಡಗಿನಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಆರೋಪದ ಪ್ರಕರಣದಲ್ಲಿ ಅವರ ಮಗ ಸಿಲುಕಿಕೊಂಡ ನಂತರ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆರ್ಯನ್ ತನ್ನ ಮನವಿಯಲ್ಲಿ, ತಾನು ನಿರಪರಾಧಿ ಮತ್ತು ಯಾವುದೇ ಅಪರಾಧ ಮಾಡಿಲ್ಲ. ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಕ್ಟೋಬರ್ 3 ರಂದು ಆರ್ಯನ್ ನನ್ನು ಬಂಧಿಸಿದ ನಂತರ ಶಾರುಖ್ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಈ ವೇಳೆ ಜೈಲಿನ ಹೊರಗೆ ಕುಳಿತಿದ್ದ ಜನರತ್ತ ಶಾರುಖ್ ನಮಸ್ಕರಿಸಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಚೆನ್ನೈ ಎಕ್ಸ್ಪ್ರೆಸ್ನಲ್ಲಿ ‘ತಿತ್ಲಿ’ ಹಾಡಿಗೆ ಧ್ವನಿ ನೀಡಿದ್ದ ಚಿನ್ಮಯಿ ಶ್ರೀಪಾದ, ಖಾನ್ ಟ್ವಿಟ್ಟರ್ನಲ್ಲಿ ತಮಗೆ ಪತ್ರ ಬರೆದ ಸಮಯವನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಜೀವನದ ಮೇಲೆ ಪ್ರಭಾವ ಬೀರಿದ ನೆಚ್ಚಿನ ನಟನ ಕಥೆಯನ್ನು ಅವರು ಹಂಚಿಕೊಂಡಿದ್ದಾರೆ. “ಎಸ್.ಆರ್.ಕೆ. ಸಾಮಾಜಿಕ ಮಾಧ್ಯಮದಲ್ಲಿ ತನ್ನ ತಾಯಿಯ ಪೋಸ್ಟ್ ಅನ್ನು ಗಮನಿಸಿದ್ದರು ಮತ್ತು ನಂತರ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಆಶೀರ್ವಾದ ಪಡೆಯುವ ಮೊದಲು ಫೋನಿನಲ್ಲಿ ಮಾತನಾಡಲು ಸಮಯ ತೆಗೆದುಕೊಂಡಿದ್ದರು. ಹಲವು ದಿನಗಳ ನಂತರ ಚೆನ್ನೈಗೆ ಬಂದಾಗ ನನ್ನ ತಾಯಿಯನ್ನು ಕಂಡು ಅವರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದಿದ್ದರು” ಎಂದು ಸೂಪರ್ ಸ್ಟಾರ್ ಶಾರುಖ್ ಅವರ ಸರಳತೆ ಬಗ್ಗೆ ಗಾಯಕಿ ಗುಣಗಾನ ಮಾಡಿದ್ದಾರೆ.ಇನ್ನು ಚಲನಚಿತ್ರ ನಿರ್ಮಾಪಕ ಮುನೀಶ್ ಕೂಡ ಶಾರುಖ್ ಖಾನ್ ಒಳ್ಳೆಯತನದ ಬಗ್ಗೆ ವಿವರಿಸಿದ್ದಾರೆ. Thread.Years ago, when I sang Titli in Chennai Express, a superstar tagged me and said I sounded like love. If I remember right, it was the first time an actor, anywhere had said anything nice about my singing. I remember laughing and crying at the same time. — Chinmayi Sripaada (@Chinmayi) October 21, 2021 This was the tweet. And he replied. From the barrage of tweets that he was getting that day. (And seeing the replies to my tweet, several years on, makes me see people in new light 😃) pic.twitter.com/7HjD5L5df6 — Chinmayi Sripaada (@Chinmayi) October 21, 2021