
ಧನ್ ತೇರಸ್ ಅಥವಾ ದೀಪಾವಳಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ಚಿನ್ನ ಖರೀದಿಗೆ ಇಷ್ಟಪಡ್ತಾರೆ. ಚಿನ್ನದ ಬೆಲೆ ಸದ್ಯ ಏರಿಕೆ ಮುಖ ಮಾಡಿದೆ. ಆಭರಣ ಖರೀದಿ ಸಾಧ್ಯವಿಲ್ಲ ಎನ್ನುವವರು ಕೇವಲ ಒಂದು ರೂಪಾಯಿಗೆ ಚಿನ್ನ ಖರೀದಿ ಮಾಡಬಹುದು. ಡಿಜಿಟಲ್ ಗೋಲ್ಡ್ ಉತ್ತಮ ಆಯ್ಕೆಯಾಗಿದೆ. ಗೂಗಲ್ ಪೇ, ಪೇಟಿಎಂ, ಪೋನ್ ಪೇ ನಂತಹ ಹಲವು ಮೊಬೈಲ್ ವ್ಯಾಲೆಟ್ ಪ್ಲಾಟ್‌ಫಾರ್ಮ್ ಮೂಲಕ 1 ರೂಪಾಯಿಗೆ ಚಿನ್ನ ಖರೀದಿ ಮಾಡಬಹುದು.
ಡಿಜಿಟಲ್ ಚಿನ್ನ, ಭೌತಿಕ ಚಿನ್ನಕ್ಕಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಭೌತಿಕ ಚಿನ್ನದಲ್ಲಿ, ಆಭರಣಗಳ ಅಂಗಡಿಯಿಂದ ಚಿನ್ನದ ಆಭರಣಗಳು ಅಥವಾ ನಾಣ್ಯವನ್ನು ಖರೀದಿ ಮಾಡಬೇಕಾಗುತ್ತದೆ, ಆದರೆ ಇಲ್ಲಿ, ಚಿನ್ನವನ್ನು ಮುಟ್ಟಲು ಸಾಧ್ಯವಿಲ್ಲ. ಚಿನ್ನದ ಶುದ್ಧತೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕಳೆದ ಕೆಲವು ವರ್ಷಗಳಲ್ಲಿ, ಡಿಜಿಟಲ್ ಚಿನ್ನ ಹೂಡಿಕೆ ಪ್ರಾಮುಖ್ಯತೆ ಪಡೆಯುತ್ತಿದೆ.
ಗೂಗಲ್ ಪೇನಲ್ಲಿ ಚಿನ್ನ ಖರೀದಿ ಆಡಲು ಮೊದಲು ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಕೆಳಗೆ ಸ್ಕ್ರಾಲ್ ಮಾಡಬೇಕು. ಅಲ್ಲಿ ಕಾಣುವ ಗೋಲ್ಡ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಚಿನ್ನವನ್ನು ಖರೀದಿಸಿ ಎಂಬ ಆಯ್ಕೆ ಆರಿಸಬೇಕಾಗುತ್ತದೆ.
ಒಂದು ರೂಪಾಯಿಯಲ್ಲೂ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು. ಇದಕ್ಕೆ ಶೇಕಡಾ 3ರಷ್ಟು ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ. ಪ್ಲಾಟ್‌ಫಾರ್ಮ್‌ನಲ್ಲಿ 5 ರೂಪಾಯಿ ಮೌಲ್ಯದ ಡಿಜಿಟಲ್ ಚಿನ್ನವನ್ನು ಖರೀದಿಸಿದರೆ, ನಿಮಗೆ 0.9 ಮಿಗ್ರಾಂ ಬಂಗಾರ ಸಿಗುತ್ತದೆ. ಚಿನ್ನವನ್ನು ಮಾರಾಟ ಮಾಡಬೇಕಾದ್ರೆ ಸೇಲ್ ಬಟನ್ ಕ್ಲಿಕ್ ಮಾಡಬೇಕು.