alex Certify BIG NEWS: ಶತಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ದರಾಮಯ್ಯ ತಿರುಗೇಟು; ಖಾಲಿ ತಟ್ಟೆಯ ಪ್ರಚಾರ ಬಿಟ್ಟು ಮೊದಲು ವ್ಯಾಕ್ಸಿನ್ ಸಂಖ್ಯೆ ಹೆಚ್ಚಿಸಿ; ಪ್ರಧಾನಿಗೆ ಟಾಂಗ್ ನೀಡಿದ ವಿಪಕ್ಷನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶತಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ದರಾಮಯ್ಯ ತಿರುಗೇಟು; ಖಾಲಿ ತಟ್ಟೆಯ ಪ್ರಚಾರ ಬಿಟ್ಟು ಮೊದಲು ವ್ಯಾಕ್ಸಿನ್ ಸಂಖ್ಯೆ ಹೆಚ್ಚಿಸಿ; ಪ್ರಧಾನಿಗೆ ಟಾಂಗ್ ನೀಡಿದ ವಿಪಕ್ಷನಾಯಕ

ಬೆಂಗಳೂರು: ದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಅತ್ಯವಸರದಿಂದ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

BIG NEWS: ʼಸುಕನ್ಯಾ ಸಮೃದ್ಧಿʼ ಸೇರಿದಂತೆ ವಿವಿಧ ಯೋಜನೆ ಹೊಂದಿರುವ ಗ್ರಾಹಕರಿಗಾಗಿ ಅಂಚೆ ಇಲಾಖೆಯಿಂದ ಹೊಸ ಸೇವೆ

ದೇಶದ 139 ಕೋಟಿ ಜನರಲ್ಲಿ 68 ಕೋಟಿ ಜನರಿಗೆ ಇನ್ನೂ ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಯಾವ ಸಾಧನೆಗೆ ಈ ಸಂಭ್ರಮಾಚರಣೆ? ಘೋಷಿತ ಗುರಿಯಂತೆ ದೇಶದ 103 ಕೋಟಿ ವಯಸ್ಕರರಿಗೆ ಡಿಸೆಂಬರ್ 31ರೊಳಗೆ 2 ಡೋಸ್ ನೀಡಲು 206 ಕೋಟಿ ಲಸಿಕೆ ಅಗತ್ಯವಿದೆ. ಕೊಟ್ಟಿರುವುದು 100 ಕೋಟಿ ಮಾತ್ರ. ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ಧತೆ ಖಾಲಿ ತಟ್ಟೆ ಪ್ರಚಾರವಲ್ಲ ಎಂದು ಸರಣಿ ಟ್ವೀಟ್ ಮೂಲಕ ಶತಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

‌ʼಸೌಂದರ್ಯ ಸ್ಪರ್ಧೆʼಯಲ್ಲಿ ತಾರತಮ್ಯ ಆರೋಪ: ಕೇಸ್ ದಾಖಲು

ಅಮೆರಿಕ 56%, ಚೀನಾ 70% ಜನರಿಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಿ ಬೂಸ್ಟರ್ ಲಸಿಕೆ ನೀಡುವ ಸಿದ್ಧತೆಯಲ್ಲಿದೆ. ಭಾರತದಲ್ಲಿ ಕೇವಲ 21% ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಯಾವ ಸಾಧನೆಗೆ ಸಂಭ್ರಮ? ವೈಫಲ್ಯದ ವಿಶ್ವಗುರು ಕುಖ್ಯಾತಿಗಾಗಿಯೇ? ಎಂದು ಪ್ರಶ್ನಿಸಿದ್ದಾರೆ.

ಸುಳ್ಳು ಸಾಧನೆಗಳ ಖಾಲಿ ತಟ್ಟೆ ಬಡಿಯುತ್ತಾ ದೇಶದ ಜನರನ್ನು ಮರುಳು ಮಾಡುತ್ತಾ ಬಂದ ನರೇಂದ್ರ ಮೋದಿಯವರೇ ಮೊದಲು ದೇಶದ ಪ್ರತಿಯೊಬ್ಬರಿಗೂ ಎರಡು ಡೋಸ್ ಲಸಿಕೆ ನೀಡಲು ಗಂಭೀರವಾಗಿ ಸರ್ಕಾರವನ್ನು ತೊಡಗಿಸಿಕೊಳ್ಳಿ. ಸಾಧನೆಯ ಸಂಭ್ರಮಾಚರಣೆ ಆ ಮೇಲೆ ಮಾಡೋಣ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...