ನವದೆಹಲಿ: ದೇಶಾದ್ಯಂತ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ ಪೂರ್ಣಗೊಳಿಸಲಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆ. ದೇಶವಾಸಿಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಚಂದಾದಾರಿಕೆಯಲ್ಲಿ ಈ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡ ಜಿಯೋ
ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಕೊರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿದೆ. 100 ಕೋಟಿ ಲಸಿಕೆ ನೀಡಿಕೆ ಭಾರತದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ವ್ಯಾಕ್ಸಿನೇಷನ್ ನಲ್ಲಿ ಜಗತ್ತಿನಲ್ಲಿಯೇ ಭಾರತ 2ನೇ ಸ್ಥಾನದಲ್ಲಿದ್ದೇವೆ. ಕೋವಿಡ್ ಲಸಿಕೆ ನೀಡಿಕೆಯಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಆರಂಭದಲ್ಲಿ ಭಾರತ ಕೋವಿಡ್ ವಿರುದ್ಧದ ಹೋರಾಟವನ್ನು ಹೇಗೆ ಎದುರಿಸುತ್ತದೆ? 130 ಕೋಟಿ ಜನರಿಗೆ ಲಸಿಕೆ ಸಾಧ್ಯವೆ? ದೇಶದಲ್ಲಿ ವ್ಯಾಕ್ಸಿನ್ ಯಾವಾಗ ಬರುತ್ತೆ? ವ್ಯಾಕ್ಸಿನ್ ತಯಾರಿಸುವುದು ಯಾವಾಗ? ಎಂಬ ಹಲವು ಪ್ರಶ್ನೆಗಳು ಎದ್ದಿದ್ದವು. ಆದರೆ ಕಠಿಣ ಗುರಿ ಇಟ್ಟುಕೊಂಡು ದೇಶದಲ್ಲಿಯೇ ಲಸಿಕೆ ಕಂಡು ಹಿಡಿದು ಉಚಿತವಾಗಿ ಲಸಿಕೆ ನೀಡಿಕೆಯಲ್ಲಿ ಭಾರತ ಸಾಧನೆ ಮಾಡಿದೆ. ಈ ಮೂಲಕ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಾಗಿದೆ. ಇಡೀ ವಿಶ್ವವೇ ಭಾರತದ ಈ ಸಾಮರ್ಥ್ಯವನ್ನು ನೋಡುತ್ತಿದೆ ಎಂದು ಹೇಳಿದರು.
BIG NEWS: ಚೀನಾದಲ್ಲಿ ಮತ್ತೆ ಡೆಡ್ಲಿ ವೈರಸ್ ರೌದ್ರಾವತಾರ; ವಿಮಾನಯಾನ, ಶಾಲೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳು ಬಂದ್
ವ್ಯಾಕ್ಸಿನ್ ನೀಡಿಕೆಯಲ್ಲಿ ವಿವಿಐಪಿ ಸಂಸ್ಕೃತಿ ಇಲ್ಲ, ಬಡವರು, ಶ್ರೀಮಂತರು ಎಲ್ಲರಿಗೂ ಒಂದೇ ಮಾದರಿಯ ವ್ಯಾಕ್ಸಿನ್ ನೀಡಲಾಗಿದೆ. ಕಾರಣ ಸಾಂಕ್ರಾಮಿಕ ರೋಗ ಯಾವುದೇ ತಾರತಮ್ಯ ಮಾಡಲ್ಲ. ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಕೊರೊನಾ ಗೆದ್ದಿದ್ದೇವೆ. ಈ ಮೂಲಕ ಭಾರತದ ನಾಲ್ಕು ದಿಕ್ಕಿನಲ್ಲಿಯೂ ಹೊಸ ವಿಶ್ವಾಸ ಮೂಡಿದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಧನಾತ್ಮಕ ವಾತಾವರಣ ನಿರ್ಮಾಣವಾಗಿದೆ. ಭಾರತೀಯರಲ್ಲಿಯೂ ಹೊಸ ಭರವಸೆ ಮೂಡಿದೆ ಎಂದು ಹೇಳಿದರು.