ನೌಕರರ ಅನುಕೂಲಕ್ಕಾಗಿ ಎನ್.ಪಿ.ಎಸ್. ಮತ್ತಷ್ಟು ಸರಳಗೊಳಿಸಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಸರಳಗೊಳಿಸಿದ್ದು, ಮೂರು ಬಾರಿ ಪಿಂಚಣಿಯ ಶೇಕಡ 25 ರಷ್ಟು ಭಾಗವನ್ನು ಹಿಂಪಡೆದುಕೊಳ್ಳುವ ಪ್ರಕ್ರಿಯೆ ಸುಲಭಗೊಳಿಸಲಾಗಿದೆ.
ಇದಕ್ಕಾಗಿ ಭೌತಿಕವಾಗಿ ದಾಖಲೆ ಸಲ್ಲಿಸಬೇಕಿಲ್ಲ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಾಲ್ಕು ದಿನದೊಳಗೆ ಪಿಂಚಣಿ ಭಾಗವನ್ನು ಪಡೆಯಬಹುದಾಗಿದೆ. ಕೆಲವೇ ನಿಮಿಷಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದರಿಂದ ಸಮಯ ಉಳಿತಾಯವಾಗಲಿದೆ. ಕಚೇರಿಗೆ ಅಲೆದಾಟ ತಪ್ಪಲಿದೆ. ಅಲ್ಲದೆ ಭೌತಿಕ ದಾಖಲೆ ಸಲ್ಲಿಸುವ ಅಗತ್ಯವಿರುವುದಿಲ್ಲ. ಸ್ವಯಂ ಘೋಷಣೆಯ ಮೂಲಕ ಪಿಂಚಣಿಯನ್ನು ಪಡೆಯಬಹುದಾಗಿದೆ.
ವೈದ್ಯಕೀಯ ತುರ್ತು ಸಂದರ್ಭದಲ್ಲಿ ಎನ್.ಪಿ.ಎಸ್. ಹಿಂಪಡೆಯಲು ಅವಕಾಶವಿದೆ. ಎನ್.ಪಿ.ಎಸ್. ನಿರ್ವಹಣೆ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ ಸಿ.ಆರ್.ಎ. ಅಪ್ಲಿಕೇಶನ್ ಮೂಲಕ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ ಯೂಸರ್ ಐಡಿಯಾಗಿ ಬಳಸಿ ಪಿಂಚಣಿದಾರರು ಲಾಗಿನ್ ಆಗಬೇಕು. ನಂತರದಲ್ಲಿ ವಿವಿಧ ಮಾಹಿತಿಯನ್ನು ನಮೂದಿಸಿ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ನಮೂದಿಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಅರ್ಜಿ ಸಲ್ಲಿಕೆ ಮಾಡಿದ 4 ದಿನಗಳೊಳಗೆ ನಿಮ್ಮ ಖಾತೆಗೆ ವರ್ಗಾವಣೆ ಆಗಲಿದೆ ಎಂದು ಹೇಳಲಾಗಿದೆ.