ಪ್ಯಾರಿಸ್: ಫ್ರಾನ್ಸ್ನ ಪ್ರಮುಖ ಸ್ತ್ರೀವಾದಿ ಸಂಘಟನೆಯು ಮಿಸ್ ಫ್ರಾನ್ಸ್ ಸೌಂದರ್ಯ ಸ್ಪರ್ಧೆಯ ಪ್ರವರ್ತಕರ ವಿರುದ್ಧ ಕಾರ್ಮಿಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರ ಆಯ್ಕೆಯಲ್ಲಿ ತಾರತಮ್ಯ ಮಾನದಂಡಗಳನ್ನು ಬಳಸಿದೆ ಎಂದು ಆರೋಪಿಸಲಾಗಿದೆ.
‘ಒಸೆಜ್ ಲೆ ಫೆಮಿನಿಸ್ಮೆ’ (ಡೇರ್ ಟು ಫೆಮಿನಿಸ್ಟ್) ಗುಂಪು, ಮೂವರು ಸೋತ ಸ್ಪರ್ಧಿಗಳೊಂದಿಗೆ ಈ ಮೊಕದ್ದಮೆ ಹೂಡಿದೆ. ಮಿಸ್ ಫ್ರಾನ್ಸ್ ಕಂಪನಿ ಹಾಗೂ ಎಂಡೆಮೋಲ್ ಪ್ರೊಡಕ್ಷನ್ ಟಾರ್ಗೆಟ್ ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ. ಇದು ಟಿಎಫ್ 1 ಚಾನೆಲ್ನಲ್ಲಿ ವಾರ್ಷಿಕ ಟಿವಿ ಕಾರ್ಯಕ್ರಮವನ್ನು ಪ್ರದರ್ಶಿಸುತ್ತದೆ. ಕಂಪನಿಗಳು ಫ್ರೆಂಚ್ ಕಾರ್ಮಿಕ ಕಾನೂನನ್ನು ತಾರತಮ್ಯದ ಆಯ್ಕೆ ಮಾನದಂಡಗಳೊಂದಿಗೆ ಉಲ್ಲಂಘಿಸುತ್ತಿವೆ ಎಂಬುದು ಅವರ ವಾದವಾಗಿದೆ.
ಪ್ಯಾರಿಸ್ ಉಪನಗರವಾದ ಬೋಬಿಗ್ನಿಯಲ್ಲಿರುವ ಕಾರ್ಮಿಕ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವು, ಮಿಸ್ ಫ್ರಾನ್ಸ್ ಸ್ಪರ್ಧಿಗಳನ್ನು, ಸಂಘಟಕರು ಮತ್ತು ಟಿವಿ ಕಂಪನಿಯ ವಾಸ್ತವಿಕ ಉದ್ಯೋಗಿಗಳಾಗಿ ಮ್ಯಾಜಿಸ್ಟ್ರೇಟ್ಗಳು ಗುರುತಿಸುತ್ತಾರೆಯೇ ಎಂಬುದರ ಮೇಲೆ ಅವಲಂಬಿತವಾಗಿದೆ. ಇನ್ನು ಈ ಬಗ್ಗೆ ಮಿಸ್ ಫ್ರಾನ್ಸ್ ಆಯೋಜಿಸಿರುವ ಕಂಪನಿ ಪ್ರತಿಕ್ರಿಯಿಸಲು ನಿರಾಕರಿಸಿದೆ.